Connect with us

Cricket

ಪ್ರೇಮ ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಬೌಲ್ಡ್!

Published

on

ಮುಂಬೈ: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಪ್ರೇಮ ಪಾಶದಲ್ಲಿ ಸಿಲುಕಿದ್ದು, ಗೆಳತಿಯ ಮಿಂಚಿನ ನೋಟಕ್ಕೆ ಈ ಬಾರಿ ಲವ್ ಅಂಗಳದಲ್ಲಿ ಬೌಲ್ಡ್ ಆಗಿದ್ದಾರೆ.

ಹಾರ್ದಿಕ್ ಪಾಂಡ್ಯ ಸರ್ಬಿಯಾ ಮೂಲದ ನಟಿ ನತಾಶಾ ಸ್ಟೈನಕೊವಿಕ್ ಅವರ ಪ್ರೇಮ ಬಂಧನದಲ್ಲಿ ಬಂಧಿಯಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ಹೊಸ ಗೆಳತಿಯ ಜೊತೆಗಿನ ರಿಲೇಶನ್ ಶಿಪ್ ಬಗ್ಗೆ ಪಾಂಡ್ಯ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ನತಾಶಾರನ್ನು ಕುಟುಂಬಸ್ಥರಿಗೆ ಸಹ ಪರಿಚಯ ಮಾಡಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಗೆಳೆಯರು ಆಯೋಜಿಸಿದ್ದ ಪಾರ್ಟಿಗೆ ಹಾರ್ದಿಕ್ ಪಾಂಡ್ಯ ಮತ್ತು ನಶಾತಾ ಜೊತೆಯಾಗಿ ತೆರಳಿದ್ದರು. ಪಾರ್ಟಿಯಲ್ಲಿ ನತಾಶಾರನ್ನು ತಮ್ಮ ಗರ್ಲ್ ಫ್ರೆಂಡ್ ಎಂದು ಎಲ್ಲರಿಗೂ ಪಾಂಡ್ಯ ಪರಿಚಯಿಸಿದ್ದಾರೆ ಎಂದು ವರದಿಯಾಗಿದೆ.

View this post on Instagram

👧🏽 💟

A post shared by Nataša Stanković✨ (@natasastankovic__) on

ಇದೇ ಪಾರ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹಿರಿಯ ಸೋದರ ಮತ್ತು ಅತ್ತಿಗೆ ಸಹ ಭಾಗಿಯಾಗಿದ್ದರು. ಖಾಸಗಿ ವಾಹಿನಿಯಲ್ಲಿ ನಚ್ ಬಲಿಯೇ-9ರ ಸ್ಪರ್ಧಿಯಾಗಿದ್ದ ಎಲಿ ಗೋನಿ ಜೊತೆ ನತಾಶಾರ ಹೆಸರು ಕೇಳಿ ಬಂದಿತ್ತು. ಸರ್ಬಿಯಾ ಮೂಲದ ನತಾಶಾ ಕಳೆದ ಮೂರು ವರ್ಷಗಳಿಂದ ಡ್ಯಾನ್ಸ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. 2010ರಲ್ಲಿ ಸರ್ಬಿಯಾದ ಕ್ರೀಡಾ ಪ್ರಶಸ್ತಿ ನತಾಶಾ ಪಡೆದಿದ್ದಾರೆ.

ಈ ಹಿಂದೆ ಹಾರ್ದಿಕ್ ಪಾಂಡ್ಯ ಮತ್ತು ನಟಿ ಪರಿಣೀತಿ ಚೋಪ್ರಾ ಇಬ್ಬರ ಮಧ್ಯೆ ಲವ್ ಇದೆ ಎಂಬ ಸುದ್ದಿ ಹರಿದಾಡಿತ್ತು. ಕೊನೆಗೆ ಇಬ್ಬರು ನಮ್ಮ ಮಧ್ಯೆ ಯಾವುದೇ ಪ್ರೇಮವಿಲ್ಲ ಎಂದು ಸ್ಪಷ್ಟನೆ ನೀಡುವ ಎಲ್ಲ ರೂಮರ್ ಗಳಿಗೆ ತೆರೆ ಎಳೆದಿದ್ದರು.