Connect with us

Bengaluru City

ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

Published

on

ಬೆಂಗಳೂರು: ತರಬೇತಿ ಪಡೆಯದೆ, ಓದದೆ ಇಂದು ಸರಿಗಮಪ ಶೋ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಹನುಮಂತ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಆವೃತ್ತಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಆಯ್ಕೆಯಾಗಿದ್ದರು. ಹನುಮಂತ ಸುಮಧುರವಾಗಿ ಹಾಡು ಹಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಹೊತ್ತು ಮಾತನಾಡದೆ ಭಾವುಕರಾಗಿದ್ದರು.

ಶನಿವಾರ ಪ್ರಸಾರವಾದ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ಹನುಮಂತ ‘ದುಡ್ಡು ಕೊಟ್ಟರೆ ಬೇಕಾದು ಸಿಗುತೈತೇ ಈ ಜಗದಲಿ ತಮ್ಮ’ ಎಂಬ ಹಾಡನ್ನು ಹಾಡಿದ್ದರು. ಈ ಹಾಡನ್ನು ಹಾಡಿದ ನಂತರ ಅನುಶ್ರೀ ಅವರು ವೇದಿಕೆಯ ಮೇಲೆ ಬಂದು ಈ ಹಾಡನ್ನು ಹಾಡುವ ಮೂಲಕ ನಮ್ಮ ತಾಯಿಯನ್ನು ನೆನಪಿಸಿದ್ದೀರಿ ಎಂದು ಹೇಳಿದರು. ಈ ವೇಳೆ ನಿಮಗೆ ನಿಮ್ಮ ತಾಯಿ ನೆನಪಾಗುತ್ತಿದ್ದಾರಾ ಎಂದು ಪ್ರಶ್ನೆ ಕೇಳಿದ್ದಾರೆ.

ಅನುಶ್ರೀ ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಸೆಕೆಂಡ್ ಮಾತನಾಡದೆ ಭಾವುಕರಾಗಿ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ನಾನು ನಮ್ಮ ಅಮ್ಮ, ಅಪ್ಪ ಮತ್ತು ಕುರಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಅಮ್ಮನಿಂದ ದೂರ ಇದ್ದೀನಿ. ತುಂಬಾ ನೆನಪಾಗುತ್ತಿದ್ದಾರೆ ಎಂದು ಅಮ್ಮನ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

ಈ ನಡುವೆ ಅನುಶ್ರೀ ಅವರು ಕ್ಯಾಮೆರಾ ಮುಂದೆ ನಿಮ್ಮ ತಾಯಿಗೆ ಒಂದು ಮಾತು ಹೇಳಿ ಅಂತ ಹೇಳಿದ್ದಾರೆ. ಆಗ ಹನುಮಂತ ತಮ್ಮ ಭಾಷೆಯಲ್ಲಿ ‘ಯವ್ವ ನಾನ್ ಆರಾಮಿದ್ದೀನಿ, ನೀನು ಆರಾಮಾಗಿ ಇರು’ ಎಂದು ಹೇಳಿದ್ದಾರೆ. ಹನುಮಂತ ಹಾಡನ್ನು ಕೇಳಿ ವೇದಿಕೆಯ ಮೇಲಿದ್ದ ಎಲ್ಲರು ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಅವರು ಅವರವರ ತಾಯಿಯನ್ನು ನೆನಪಿಸಿಕೊಂಡು ಹನುಮಂತಗೆ ಚೆನ್ನಾಗಿ ಹಾಡಿದ್ದೀಯಾ ಎಂದು ಗೋಲ್ಡನ್ ಬಜಾರ್ ಒತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv