Sunday, 16th June 2019

Recent News

ಹನ್ಸಿಕಾ ಮೊಬೈಲ್ ಹ್ಯಾಕ್- ನಟಿಯ ಪ್ರೈವೇಟ್ ಫೋಟೋ ವೈರಲ್

ಹೈದರಾಬಾದ್: ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಮೊಬೈಲ್ ಹ್ಯಾಕ್ ಆಗಿದ್ದು, ಬಿಕಿನಿಯಲ್ಲಿರುವ ಫೋಟೋಗಳು ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹನ್ಸಿಕಾ ಅವರ ಪ್ರೈವೇಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತಿದ್ದಂತೆ ನನ್ನ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಟ್ವಿಟ್ಟರ್ ಖಾತೆ ಕೂಡ ಹ್ಯಾಕ್ ಆಗಿದ್ದು, ನಿಮಗೆ ಯಾವುದೇ ಮೆಸೇಜ್ ಬಂದರೆ ಅದಕ್ಕೆ ಪ್ರತಿಕ್ರಿಯಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹನ್ಸಿಕಾ ತಮ್ಮ ಟ್ವಿಟ್ಟರಿನಲ್ಲಿ, “ನನ್ನ ಫೋನ್ ಹಾಗೂ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ದಯವಿಟ್ಟು ಯಾರು ಮೆಸೇಜ್‍ಗಳಿಗೆ ಪ್ರತಿಕ್ರಿಯಿಸಬೇಡಿ. ನನ್ನ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. ಎಲ್ಲವು ಸರಿ ಹೋಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ತಮಿಳು ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿತ್ತು. ಅಕ್ಷರಾ ಫೋಟೋ ಲೀಕ್ ಆಗುತ್ತಿದ್ದಂತೆ ಸೈಬರ್ ಕ್ರೈಂಗೆ ದೂರು ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *