Connect with us

International

WTC ದಾಳಿಯ ವಿಮಾನ ಪೈಲಟ್ ಪುತ್ರಿಯ ಕೈಹಿಡಿದ ಉಗ್ರ ಒಸಾಮಾ ಪುತ್ರ!

Published

on

ಲಂಡನ್: ಹತ್ಯೆಯಾಗಿರುವ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಉಗ್ರನ ಪುತ್ರಿಯನ್ನೇ ಮದುವೆಯಾಗಿದ್ದಾನೆ.

ಅಮೆರಿಕದ 2001ರ ನವೆಂಬರ್ 9ರಂದು ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಯ ಪ್ರಮುಖ ರುವಾರಿ ಹಾಗೂ ವಿಮಾನದ ಪೈಲಟ್ ಆಗಿದ್ದ ಮೊಹಮ್ಮದ್ ಅಟ್ಟಾ ಪುತ್ರಿಯನ್ನು ಹಮ್ಜಾ ವಿವಾಹವಾಗಿದ್ದಾನೆ.

ಲಾಡೆನ್ ಪುತ್ರ ಹಮ್ಜಾ ಅಟ್ಟಾ ಪುತ್ರಿಯನ್ನು ಮದುವೆಯಾಗಿದ್ದಾನೆಂದು ಲಾಡೆನ್ ಕುಟುಂಬದ ಅಹ್ಮದ್ ಮತ್ತು ಹಸನ್ ಅಲ್ ಅಟ್ಟಾಸ್ ಅಮೆರಿಕದ ದಿ ಗಾರ್ಡಿಯನ್ ಪತ್ರಿಕೆಯ ಸಂದರ್ಶನದಲ್ಲಿ ಈ ಮಾಹಿತಿಯನ್ನು ತಿಳಿಸಿದ್ದಾರೆ.

ಮೊಹಮ್ಮದ್ ಅಟ್ಟಾ ಮಗಳನ್ನು ಹಮ್ಜಾ ಬಿನ್ ಲಾಡೆನ್ ವಿವಾಹವಾಗಿದ್ದಾನೆ. ಆದರೆ ಸದ್ಯ ಅವನು ಈಗ ಎಲ್ಲಿದ್ದಾನೆ ಎನ್ನುವುದು ನನಗೆ ತಿಳಿದಿಲ್ಲ, ಆದರೆ ಅವನು ಅಫ್ಘಾನಿಸ್ಥಾನದಲ್ಲಿಯೇ ಇದ್ದಾನೆ ಎಂದು ನಾವು ತಿಳಿದಿದ್ದೇವೆ. ಹಮ್ಜಾ ಪ್ರಸ್ತುತ ಅಲ್ ಖೈದಾ ಸಂಘಟನೆಯ ಅತ್ಯುನ್ನತ ನಾಯಕ ಪಟ್ಟವನ್ನೇರಿದ್ದಾನೆ. ಅಲ್ಲದೆ ಆತ ತನ್ನ ತಂದೆಯ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಗುರಿ ಹೊಂದಿದ್ದಾನೆ ಎಂದು ತಿಳಿಸಿದ್ದಾರೆ.

ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್ ನಲ್ಲಿ 2011 ರ ಮೇ 2 ರಂದು ಅಮೆರಿಕ ನಡೆಸಿದ್ದ ಮಿಲಿಟರಿ ದಾಳಿಯಲ್ಲಿ ಹತ್ಯೆಗೀಡಾಗಿದ್ದನು. ಹಮ್ಜಾ ಬಿನ್ ಲಾಡೆನ್, ಒಸಾಮಾನ ಪತ್ನಿಯಾದ ಖೈರಯ ಸಬಾರ್ ಳ ಪುತ್ರನಾಗಿದ್ದಾನೆ. ಈಕೆ ಒಸಾಮಾನನ್ನು ಅಮೆರಿಕ ಪಡೆ ಹತ್ಯೆ ಮಾಡುವ ವೇಳೆ ಅಬೋಟಾಬಾದ್ ನಲ್ಲಿ ತನ್ನ ಪತಿಯ ಸಂಗಡ ವಾಸವಿದ್ದಳು.

ಮೊಹಮ್ಮದ್ ಅಟ್ಟಾ ವಿಮಾನ ಹೈಜಾಕ್ ಮಾಡಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿ ನಡೆಸಿದ್ದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews