Connect with us

Bengaluru City

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ – ವಿಶ್ವನಾಥ್ ಆರೋಪ

Published

on

Share this

– ಯಡಿಯೂರಪ್ಪ ನವರಿಗೆ ಮೊದಲು ಶಕ್ತಿ ಇತ್ತು ಈಗ ಇಲ್ಲ
– ನಾನು ಹಳ್ಳಿ ಹಕ್ಕಿ ಸ್ವಚ್ಛಂದವಾಗಿ ಹಾಡುತ್ತೇನೆ ಹಾರುತ್ತೇನೆ ಬೆರೆಯುತ್ತೇನೆ
– ಜಯಲಕ್ಷ್ಮಿ ಗಂಡ ಅವನಿಗೆ ಸಂಸ್ಕಾರ, ಸಂಸ್ಕೃತಿ ಇದ್ಯಾ

ಬೆಂಗಳೂರು: ಪ್ರತಿಪಕ್ಷಗಳು ಆಡಳಿತ ಪಕ್ಷಗಳ ಮೇಲೆ ಆರೋಪ ಮಾಡುವುದು ಸಾಮಾನ್ಯ. ಅದರೆ ಈ ಬಾರಿ ಆಡಳಿತ ಪಕ್ಷದ ಶಾಸಕರಾದ ವಿಶ್ವನಾಥ್ ಅವರು ಸ್ವಪಕ್ಷದ ನಾಯಕರ ಮೇಲೆಯೇ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್ ಅವರು, ನನ್ನಂತ ಹುಚ್ಚನ ತ್ಯಾಗದಿಂದ ಬಿಡಿಎ ಅಧ್ಯಕ್ಷನಾಗಿ ಎಸ್.ಆರ್.ವಿಶ್ವನಾಥ್ ದೋಚುತ್ತಿದ್ದಾನೆ. ಕೊರೊನಾ ಮೊದಲ ಅಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಾಕಿದ ಹಾಕಿದ 10 ಸಾವಿರ ಬೆಡ್ ಫ್ಯಾನ್ ಎಲ್ಲಾ ಏನಾಯ್ತು ವಿಶ್ವನಾಥ್ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪಗೆ ವಯಸ್ಸಾಗಿದೆ, ಸ್ಪಿರಿಟ್ ಇಲ್ಲ: ಹೆಚ್. ವಿಶ್ವನಾಥ್

ನೀನೇ ಉಸ್ತುವಾರಿ ಯಾಗಿದ್ದೆ ನೀವೆಲ್ಲ ಭ್ರಷ್ಟರು. ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದೆ. 20 ಸಾವಿರ ಕೋಟಿಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹಣಕಾಸು ಇಲಾಖೆ ಹಾಗೂ ಯಾವುದೇ ಬೋರ್ಡ್ ಕ್ಲಿಯರೆನ್ಸ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಸಚಿವರು ಮಾತನಾಡುತ್ತಿದ್ದಾರೆ. ಯಾವ ಸಚಿವರು ಸಮಾಧಾನದಿಂದ ಇದ್ದಾರೆ ಹೇಳಿ? ಯಡಿಯೂರಪ್ಪ ಮಕ್ಕಳಿಂದ ಮೊದಲು ಜೈಲಿಗೆ ಹೋಗಿದ್ದರು ಎರಡನೇ ಬಾರಿಗೆ ಹೀಗಾಗ ಬಾರದು ಅನ್ನೋದು ನಮ್ಮ ಆಶಯ. ಯಡಿಯೂರಪ್ಪನವರದು ಇ.ಡಿಯಲ್ಲಿ ಕೇಸಿಲ್ವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್‍ಶೀಟ್ ಏನು?

ರೇಣುಕಾಚಾರ್ಯ ಜಯಲಕ್ಷ್ಮಿ ನರ್ಸ್ ಕಥೆ ಏನಾಯ್ತು? ಹಾಲಪ್ಪ ಊಟಕ್ಕೆ ಕರೆದ ಸ್ನೇಹಿತನ ಹೆಂಡತಿಯನ್ನು ಅತ್ಯಾಚಾರ ಮಾಡಲು ಹೋಗಿ ಸಚಿವ ಸ್ಥಾನವನ್ನು ಕಳೆದುಕೊಂಡವನು ಅವನು ಎಂದು ಬಹಿರಂಗವಾಗಿ ಕಿಡಿಕಾರಿದರು.

ನಾನು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿ ರಾಜ್ಯದಲ್ಲಿ ಪಕ್ಷದ ರಾಜಕಾರಣ ಹಾಗೂ ಸರ್ಕಾರದ ಆಡಳಿತದ ಬಗ್ಗೆ ಹೇಳಿದ್ದೇನೆ. ಇನ್ನು 22 ತಿಂಗಳು ಮಾತ್ರ ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಹೀಗೆ ಹೋದರೆ ಹಿನ್ನಡೆ ಆಗುತ್ತೆ ಅಂತ ಹೇಳಿದ್ದೇನೆ. ಅಲ್ಲದೆ 2024 ರ ಲೋಕಸಭೆ ಚುನಾವಣೆಗೂ ಎಫೆಕ್ಟ್ ಆಗುತ್ತೆ ಅಂತ ಹೇಳಿದ್ದೇನೆ. ಇದಕ್ಕೆಲ್ಲ ‘ನಾಯಕತ್ವವೇ ಕಾರಣ, ನಾಯಕತ್ವವೇ ಮುಖ್ಯ ಎಂದು ತಿಳಿಸಿದ್ದೇನೆ. 104 ರ ಜೊತೆಗೆ 17 ಸೇರಿ ಸರ್ಕಾರ ಆಗಿರೋದು ಅಂದಿದ್ದೇನೆ. ಸತ್ಯ ಹೇಳದಿದ್ದರೆ ಪಕ್ಷಕ್ಕ ದ್ರೋಹ ಮಾಡಿದಂತಾಗುತ್ತದೆ ಎಂದು ಸತ್ಯವನ್ನು ಹೇಳಿದ್ದೇನೆ ಎಂದರು.

ಡೈನಸ್ಟಿ ರೂಲ್, ಡೈನಸ್ಟಿ ಕರಪ್ಷನ್ ಬಗ್ಗೆ ಮೋದಿಯವರು ಮಾತನಾಡಿದ್ದಾರೆ. ಇಲ್ಲಿ ಅದು ಆಗುತ್ತಿದೆ. ಅದರ ಬಗ್ಗೆ ಇದ್ದ ವಿಚಾರ ಹೇಳಿದ್ದೇನೆ. 75 ವರ್ಷ ಮೀರಿದವರ ಬಗ್ಗೆ ನಮ್ಮ ಪಕ್ಷದಲ್ಲೇ ಲಕ್ಣ್ಮಣ ರೇಖೆ ಇದೆ. ಅದು ದಾಟಿದ ಮೇಲೆ ವಯಸ್ಸು ಸಹಕರಿಸಲ್ಲ. ಯಡಿಯೂರಪ್ಪ ನವರಿಗೆ ಮೊದಲು ಶಕ್ತಿ ಇತ್ತು ಈಗ ಇಲ್ಲ. ಶಕ್ತಿ ಪೀಠದ ಪ್ರಭಾವಳಿ ಕಡಿಮೆ ಆಗುತ್ತಿದೆ. ಪಕ್ಷದ ಸಿದ್ಧಾಂತ ಹಾಗೂ ಕಾರ್ಯಕ್ರಮದ ವಿರುದ್ದ ಮಾತನಾಡಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ದ್ರಾಕ್ಷಿ ಹುಳಿ ಎನ್ನುವ ನರಿ ಜಾಯಮಾನಕ್ಕೆ ಸೇರಿದವರು: ಹೆಚ್‍ಡಿಕೆ

ಈಶ್ವರಪ್ಪನವರೇ 104 ಹೆಚ್ಚಿರಬಹುದು ಆದರೆ ಬಹುಮತ ಆಗಿದ್ದು ನಾವು ಬಂದಮೇಲೆ. ಅಷ್ಟು ಸಣ್ಣ ಪೊಲಿಟಿಕಲ್ ಮ್ಯಾಥಮ್ಯಾಟಿಕ್ಸ್ ಅರ್ಥ ಆಗಲ್ವಾ? ಇದು ಕುಟುಂಬ ರಾಜಕಾರಣದ ಗಿರಾಕಿನೆ. ಈಶ್ವರಪ್ಪ ಗವರ್ನರ್ ಹತ್ತಿರ ಹೋಗಿದ್ದು ಯಾಕೆ? ಸುಮ್ಮನೆ ಹುಚ್ಚು ಹುಚ್ಚಾಗಿ ಮಾತಾಡಬೇಡಿ. ಇವತ್ತಲ್ಲ ನಾಳೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಯಡಿಯೂರಪ್ಪ ಬದಲಾಗ್ತಾರೆ. ಸತ್ಯ ಹೇಳೋರು ಒಬ್ಬರು ಬೇಕಲ್ವಾ ನಾನು ಸತ್ಯ ಹೇಳುತ್ತಿದ್ದೀನಿ. ಬಂದವರು ಯಾರು ಸಂತೋಷವಾಗಿಲ್ಲ ಒಬ್ಬೊಬ್ಬರನ್ನೆ ಮಾತಾಡಿಸಿ ಗೊತ್ತಾಗುತ್ತೆ ಎಂದರು.

ಸಿದ್ದರಾಮಯ್ಯ, ಕುಮಾರಸ್ವಾಮಿ ವಿಪಕ್ಷವಾಗಿ ಜಿಂದಾಲ್ ವಿಚಾರದಲ್ಲಿ ನಿಮ್ಮ ಸ್ಟಾಂಡ್ ಏನು? ಎಲ್ಲರೂ ಕಿಕ್ ಬ್ಯಾಕ್ ತಗೊಂಡು ಕೂತಿದ್ದಾರೆ. ಮೂರು ಪಾರ್ಟಿಯ ಸರ್ಕಾರ ಇದು. ಯೋಗೇಶ್ವರ್ ಹೇಳಿದ್ದು ಸರಿ ಇದೆ. ನಾನು ಹಳ್ಳಿ ಹಕ್ಕಿ ಸ್ವಚ್ಛಂದವಾಗಿ ಹಾಡುತ್ತೇನೆ, ಹಾರುತ್ತೇನೆ ಬೆರೆಯುತ್ತೇನೆ. ನನ್ನ ಟುವ್ವಿ ಟುವ್ವಿ ಅವರಿಗೆ ಕರ್ಕಶವಾಗಿ ಕೇಳುತ್ತೆ. ಕೇಳುವರ ಕಿವಿ ಸರಿ ಇಲ್ಲ ಅಷ್ಟೆ. ಶೇ.80 ರಷ್ಟು ಶಾಸಕರು ಒಳಗೆ ಹೋಗಿ ನಾಯಕತ್ವ ಬದಲಾವಣೆ ಬೇಕು ಎಂದು ಹೇಳಿದ್ದಾರೆ. ಆದರೆ ಹೊರಗೆ ಬಂದು ಹೇಳಲು ಧೈರ್ಯ ಇಲ್ಲ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *

Advertisement