Connect with us

Districts

ಸೈನಿಕರ ಡ್ರೆಸ್ ಹಾಕ್ಕೊಂಡು ಪೋಸ್ ನೀಡಿ ಸೈನಿಕರಿಗೆ ಮೋದಿಯಿಂದ ದ್ರೋಹ: ಎಚ್.ಕೆ.ಪಾಟೀಲ್ ಕಿಡಿ

Published

on

ಗದಗ: ಸೈನಿಕರ ಡ್ರೆಸ್ ಹಾಕಿಕೊಂಡು ಪೋಸ್ ನೀಡಿ ಸೈನಿಕರಿಗೆ ದ್ರೋಹಮಾಡಿದ್ದಾರೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಚುನಾವಣೆ ಪ್ರಚಾರದಿಂದ ತಿರಸ್ಕರಿಸುವಂತೆ ಕೇಂದ್ರ ಚುನಾವಣೆ ಆಯೋಗಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಒಟ್ಟಾಗಿ ಚುನಾವಣೆ ಎದುರಿಸುತ್ತಿದೆ. ಕರ್ನಾಟಕದಲ್ಲಿ 20 ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಗೆಲ್ಲುವ ನಿರೀಕ್ಷೆ ಇದೆ. ಕಾಂಗ್ರೆಸ್ ಪ್ರಣಾಳಿಕೆ ಬಂದ ನಂತರ ಬಿಜೆಪಿ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಕಾಂಗ್ರೆಸ್ ಪ್ರಣಾಳಿಕೆಗೆ ಉತ್ತರಿಸುವ ನೈತಿಕ ಶಕ್ತಿ ಬಿಜೆಪಿ ಕಳೆದುಕೊಂಡಿದೆ. ಹಾಗೆಯೇ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೋದಿ, ಅಮಿತ್ ಶಾ ಪ್ರಶ್ನೆ ಮಾಡಲಿ. ಆದ್ರೆ ಕಾಂಗ್ರೆಸ್ ಪ್ರಣಾಳಿಕೆ ಮೇಲೆ ಮಾತನಾಡುವ ನೈತಿಕತೆ ರಾಜೀವ್ ಕುಮಾರ್ ಗೆ  ಏನಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷರ ವಿರುದ್ಧ ಎಚ್.ಕೆ ಪಾಟೀಲ್ ಕಿಡಿಕಾರಿದರು.

ಬಿಜೆಪಿ ನಾಯಕರು ಅರಾಜಕತೆ ನಡೆಸಿದ್ದಾರೆ. ಸಾರ್ವಜನಿಕ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಮರ್ಯಾದೆ ಕಳೆಯುವ ಮಾತುಗಳನ್ನಾಡಿದ್ದಾರೆ. ಮೋದಿ ಸೇನೆ ರಾಷ್ಟ್ರಕ್ಕೆ ರಕ್ಷಣೆ ಕೊಡ್ತಿದೆ ಎಂಬ ದೇಶದ್ರೋಹಿ ಹೇಳಿಕೆ ನೀಡಿದ್ದಾರೆ. ಮೋದಿ ಸೇನೆ ಅಲ್ಲ, ಅದು ಭಾರತದ ಸೇನೆ. ಸಂವಿಧಾನದ ಉನ್ನತ ಹುದ್ದೆಯಲ್ಲಿರುವ ಯೋಗಿ ಆದಿತ್ಯನಾಥ್ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಚುನಾವಣೆ ಮುಗಿಯುವವರೆಗೂ ಯೋಗಿ ಆದಿತ್ಯನಾಥ್ ಎಲ್ಲೂ ಮಾತನಾಡದಂತೆ ಚುನಾವಣೆ ಆಯೋಗ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‍ಸಿಂಗ್ ಬಿಜೆಪಿ ಪರ ಬ್ಯಾಟಿಂಗ್ ನಡೆಸಿದ್ದಾರೆ. ಚುನಾವಣೆ ಮುಗಿಯುವ ವರೆಗೂ ಕಲ್ಯಾಣ್‍ಸಿಂಗ್ ಅವರ ಮಾತುಗಳ ಮೇಲೂ ನಿರ್ಬಂಧ ಹೇರಬೇಕೆಂದು ಅವರು ರಾಷ್ಟ್ರಪತಿಗಳಲ್ಲಿ ಮನವಿ ಮಾಡುವುದಾಗಿ ಹೇಳಿದರು.