Connect with us

Bengaluru City

ಹೆಚ್‍ಡಿಕೆ ಮನೆಯ ಆರು ಸಿಬ್ಬಂದಿಗೆ ಕೊರೊನಾ ದೃಢ

Published

on

– ರೈಡರ್ ಚಿತ್ರದ ನಿರ್ದೇಶಕರಿಗೂ ಪಾಸಿಟಿವ್

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅವರ ಸಹಾಯಕ, ಮೇಕಪ್ ಮ್ಯಾನ್, ಬೌನ್ಸರ್ ಸೇರಿದಂತೆ ಮನೆಯಲ್ಲಿಯ ಒಟ್ಟು ಆರು ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರುವ ರೈಡರ್ ಚಿತ್ರದ ನಿರ್ದೇಶಕ ಮತ್ತು ಇಬ್ಬರು ಸಹಾಯಕರ ವರದಿಯಲ್ಲಿ ಕೊರೊನಾ ದೃಢಪಟ್ಟಿದೆ.

ಶನಿವಾರ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡು ತಮ್ಮ ಸಂಪರ್ಕದಲ್ಲಿ ಬಂದವರು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಿಕೊಂಡಿದ್ದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

 

Click to comment

Leave a Reply

Your email address will not be published. Required fields are marked *