Connect with us

Karnataka

10 ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿ ಕಾಲ ಕಳೆದ ಒಡಹುಟ್ಟಿದವರು

Published

on

– ಪದವಿ ಓದಿದರೂ ಖಿನ್ನತೆ ಜಾರಿದ್ರಾ?
– ತಾಯಿ ಮೃತಪಟ್ಟ ನಂತರ ಕೊಠಡಿ ಸೇರಿದ ಮಕ್ಕಳು

ಗಾಂಧಿನಗರ: ಒಂದೇ ಕುಟುಂಬದ ಮೂವರು 10 ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿ ಕಾಲಕಳೆದಿರುವ ಅತ್ಯಂತ ವಿಚಿತ್ರ ಘಟನೆ ಗುಜರಾತ್‍ನ ರಾಜಕೋಟ್‍ನಲ್ಲಿ ನಡೆದಿದೆ.

10 ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿ ಇದ್ದವರನ್ನು ಅಮರೀಶ್(42), ಮೇಘನಾ(39) ಭವೇಶ್(30) ಎಂದು ಗುರುತಿಸಲಾಗಿದೆ. ಈ ಮೂವರು ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೇ ಕಾಲ ಕಳೆದಿದ್ದಾರೆ.

ಮೂವರು ಸಹೋದರರು ಮತ್ತು ಸಹೋದರಿ ಕತ್ತಲ ಕೋಣೆಯಲ್ಲಿ ವಾಸವಾಗಿದ್ದರು. ಇವರನ್ನು ಸಾಥಿ ಸೇವಾ ಗ್ರೂಪ್ ಸರಕಾರೇತರ ಸಂಸ್ಥೆ (ಎನ್‍ಜಿಒ) ಸದಸ್ಯರು ರಾಜ್‍ಕೋಟ್‍ನ ಐಷಾರಾಮಿ ಕಿಶನ್‍ಪರಾ ಪ್ರದೇಶದ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ಮನೆಯ ಬಾಗಿಲು ತೆರೆದಾಗ, ಕೋಣೆಗೆ ಸೂರ್ಯನ ಬೆಳಕಿಗೆ ಪ್ರವೇಶವಿಲ್ಲ ಮತ್ತು ದುರ್ವಾಸನೆ ಬರುತ್ತಿದ್ದ ಕೋಣೆಯಲ್ಲಿ ಈ ಮೂವರು ಇದ್ದರು. ಕೊಠಡಿಯಿಂದ ಇವರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಇಷ್ಟು ವರ್ಷಗಳ ಕಾಲ ಅವರು ಕೊಠಡಿಯಲ್ಲಿ ಇರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಮಾತ್ರ ನಿಗೂಢವಾಗಿದೆ.

ಈ ಮೂವರ ತಂದೆ ಹೇಳುವ ಪ್ರಕಾರ 1986ರಲ್ಲಿ ಇವರ ತಾಯಿಗೆ ಅನಾರೋಗ್ಯವಾಗಿತ್ತು. ಆ ವಿಚಾರವನ್ನು ಇವರು ಮನಸ್ಸಿಗೆ ಹಾಕಿಕೊಂಡು ಯೋಚನೆ ಮಾಡುತ್ತಿದ್ದರು. ನಂತರ ಇವರು ತಾಯಿ ತೀರಿದ ಬಳಿಕ ಈ ಇವರು ಕೊಠಡಿ ಸೇರಿಕೊಂಡರು. ನಂತರ ಹೊರಗೆ ಬರಲಿಲ್ಲ ಎಂದು ಹೇಳಿದ್ದಾರೆ.

ಈ ಮೂವರ ತಂದೆ ಶಿಕ್ಷಕರಾಗಿದ್ದಾರೆ. ಇವರ ಮಕ್ಕಳು ಕೂಡಾ ಪದವಿ ಪಡೆದಿದ್ದಾರೆ. ಅಮರೀಶ್ ಬಿಎ, ಎಲ್‍ಎಲ್‍ಬಿ ಓದಿದರೆ ಮೇಘನಾ ಮನಃಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ. ಭವನೇಶ್ ಒಬ್ಬ ಉತ್ತಮ ಕ್ರಿಕೆಟ್ ಆಟಗಾರ ಅಲ್ಲದೇ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದನು. ಆದರೆ ಇವರು ಯಾಕೆ ಕತ್ತಲ ಕೋಣೆಯಲ್ಲಿ ಸೇರಿಕೊಂಡರು ಎನ್ನುವ ಖಚಿತವಾದ ಮಾಹಿತಿ ಇಲ್ಲ. ಕೆಲವರು ವಾಮಾಚಾರ ಪ್ರಯೋಗವಾಗಿದೆ ಎಂದು ಹೇಳುತ್ತಾರೆ.

Click to comment

Leave a Reply

Your email address will not be published. Required fields are marked *