Crime

ಪತ್ನಿಯ ಕೊಲೆಗೈದು ಶವವನ್ನು ಸ್ಕೂಟರಿನಲ್ಲೇ 10 ಕಿ.ಮೀ ಸಾಗಿಸಿದ!

Published

on

Share this

– ಆರೋಪಿಯನ್ನು ಹಿಡಿದ ಸ್ಥಳೀಯರು
– ಕಾಡಿನಲ್ಲಿ ಬಿಸಾಕಲು ತೆರಳ್ತಿದ್ದ ಆರೋಪಿ

ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ಆಕೆಯ ಶವವನ್ನು 10 ಕಿ.ಮೀ ದೂರ ಸ್ಕೂಟರಿನಲ್ಲೇ ಸಾಗಿಸಿದ ವಿಲಕ್ಷಣ ಘಟನೆಯೊಂದು ಗುಜರಾತಿನ ಪಾಲಿಟಾನಾ ನಗರದ ಗ್ರಾಮವೊಂದರಲ್ಲಿ ನಡೆದಿದೆ.

ಆರೋಪಿ ಪತಿಯನ್ನು ಅಮಿತ್ ಹೆಮ್ನಾನಿ(34) ಹಾಗೂ ಮೃತ ಪತ್ನಿಯನ್ನು ನೈನಾ ಎಂದು ಗುರುತಿಸಲಾಗಿದೆ. ಕಳೆದ ವರ್ಷವಷ್ಟೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಮಿತ್ ಹಾಡಹಗಲೇ ಪತ್ನಿಯ ಶವವನ್ನು ಯಾವುದೇ ಅಂಜಿಕೆ ಇಲ್ಲದೆ ಸ್ಕೂಟರಿನಲ್ಲಿ ಸಾಗಿಸಿದ್ದಾನೆ. ಆದರೆ ರೋಹಿಶಾಲ ಪ್ರದೇಶದಲ್ಲಿ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಿಂಧಿ ಕ್ಯಾಂಪ್ ಕಾಲೋನಿಯಲ್ಲಿ ವಾಸವಿದ್ದ ಪತಿ ಹಾಗೂ ಪತ್ನಿ ನಡುವೆ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ಈ ಜಗಳ ತಾರಕಕ್ಕೇರಿ ಅಮಿತ್ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಅಮಿತ್, ಪತ್ನಿಯ ಶವವನ್ನು ಸ್ಕೂಟರಿನಲ್ಲಿ ಹಾಕಿಕೊಂಡು ಸುಮಾರು 10 ಕಿ.ಮೀ ದೂರ ಸಾಗಿದ್ದಾನೆ. ಈ ವೇಳೆ ಅಮಿತ್ ನನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆರೋಪಿ ಅಲ್ಲಿಂದ ಪಲಾಯನ ಮಾಡಲು ಪ್ರಯತ್ನಿಸಿದನು. ಆರೋಪಿ ಓಡಿ ಹೋಗಲು ಯತ್ನಿಸಿದಾಗ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ, ಶವವನ್ನು ಎಸೆಯಲು ಹೋಗುತ್ತಿರುವಾಗ ಸಿಕ್ಕಿಬಿದ್ದಿರುವುದಾಗಿ ತಿಳಿಸಿದ್ದಾನೆ. ಶವವನ್ನು ಗ್ರಾಮದ ಹೊರಗಡೆ ಇರುವ ಕಾಡಿನಲ್ಲಿ ಬಿಸಾಕಲು ತೆರಳುತ್ತಿದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿ ಬಂಧಿಸಲಾಗಿದೆ. ಪ್ರಕರಣ ಸಂಬಂಧ ಅಮಿತ್ ಹಾಗೂ ನೈನಾ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಕೊಲೆಯ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement