Monday, 22nd April 2019

Recent News

ಹಾಡಹಗಲೇ ಗ್ರಾ.ಪಂ. ಸದಸ್ಯನ ಬರ್ಬರ ಕೊಲೆ

ಬೆಂಗಳೂರು: ನಿವೇಶನದ ವಿಚಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯನನ್ನು ಹಾಡಹಗಲೇ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾಚೋಹಳ್ಳಿ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಲಕ್ಷ್ಮೀನಾರಾಯಣ್ ಕೊಲೆಯಾದ ಪಂಚಾಯತ್  ಸದಸ್ಯ. ಖಾಲಿ ನಿವೇಶನದ ಜಾಗದಲ್ಲಿ ಹರೀಶ್ ಎಂಬಾತ ಮನೆ ನಿರ್ಮಾಣ ಮಾಡಿದ್ದನು. ಇದನ್ನು ಅಕ್ರಮ ಎಂದು ಇತ್ತೀಚಿಗೆ ಬೆಂಗಳೂರು ಉತ್ತರ ತಹಶೀಲ್ದಾರ್ ನೇತೃತ್ವದಲ್ಲಿ ಮನೆಗಳನ್ನ ತೆರವು ಮಾಡಲಾಗಿತ್ತು.

ಈ ದ್ವೇಷದ ವಿಚಾರದಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. 3-4 ಜನರ ತಂಡ ಏಕಾಏಕಿ ಮಾರಕಾಸ್ತ್ರಗಳನ್ನು ಹಿಡಿದು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ತನಿಖೆಯನ್ನು ಮಾಡಿದ್ದಾರೆ.

ಸೋಮವಾರ ಮಧ್ಯಾಹ್ನ 3.00 ಗಂಟೆ ಸುಮಾರಿಗೆ ಮಾಚೇನ ಹಳ್ಳಿ ಬಳಿ ಕೊಲೆ ನಡೆದಿದೆ. ಮೂರ್ನಾಲ್ಕು ಜನರ ತಂಡ ಬಂದು ಕೃತ್ಯ ಎಸಗಿದ್ದು, ಜಾಗದ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಇನ್ಸ್ ಪೆಕ್ಟರ್ ಸತ್ಯನಾರಾಯಣ ನೇತೃತ್ವದ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನ ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ಹೇಳಿದ್ದಾರೆ.

Leave a Reply

Your email address will not be published. Required fields are marked *