Connect with us

Corona

ಥಿಯೇಟರ್, ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್-ಅನ್‍ಲಾಕ್ 4.O ಮಾರ್ಗಸೂಚಿ ಪ್ರಕಟ

Published

on

-ಏನಿರುತ್ತೆ? ಏನಿರಲ್ಲ?

ನವದೆಹಲಿ: ಕೇಂದ್ರ ಸರ್ಕಾರ ಅನ್‍ಲಾಕ್ 4.Oರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಸೆಪ್ಟೆಂಬರ 30ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ./

ಸಾಮಾಜಿಕ/ರಾಜಕೀಯ/ಕ್ರೀಡೆ/ಮನೋರಂಜನೆ/ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ 100 ಜನರು ಮಾತ್ರ ಪಾಲ್ಗೊಳ್ಳುವದರ ಜೊತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಆದೇಶ ಸೆಪ್ಟೆಂಬರ್ 21ರಿಂದ ಅನ್ವಯವಾಗಲಿದೆ.

ಹವಾನಿಯಂತ್ರಣ ರಹಿತ ಚಿತ್ರಮಂದಿರಗಳನ್ನು ಸೆಪ್ಟೆಂಬರ್ 21ರಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಸೆಪ್ಟೆಂಬರ್ 30ರವರೆಗೆ ಶಾಲೆ ಕಾಲೇಜು ಮತ್ತು ತರಬೇತಿ ಕೇಂದ್ರಗಳು ಬಂದ್ ಆಗಲಿವೆ. ಆನ್‍ಲೈನ್ ಕ್ಲಾಸ್‍ಗಳು ಮುಂದುವರಿಯಲಿದೆ. ಶಾಲೆಗಳು ಶಿಕ್ಷಕ ಮತ್ತು ಇನ್ನಿತರ ಸಿಬ್ಬಂದಿ ಶೇ.50 ಹಾಜರಾತಿ ಇರುವಂತೆ ನೋಡಿಕೊಳ್ಳುವುದು. ಆನ್‍ಲೈನ್ ಕ್ಲಾಸ್ ಅಥವಾ ಟೆಲಿ ಕೌನ್ಸಿಲಿಂಗ್ ಇನ್ನಿತರ ಕಾರ್ಯಗಳಿಗೆ ಶೇ.50 ರಷ್ಟು ಸಿಬ್ಬಂದಿಯನ್ನು ಶಾಲೆಗಳು ಬಳಸಿಕೊಳ್ಳುವುದು.

9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಪೋಷಕರ ಲಿಖಿತ ಅನುಮತಿ ಪಡೆದು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಬಹುದು. (ಕಂಟೈನ್‍ಮೆಂಟ್ ಝೋನ್ ವಿದ್ಯಾರ್ಥಿಗಳು ಹೊರತುಪಡಿಸಿ). ಉನ್ನತ ಶಿಕ್ಷಣ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಅಥವಾ ಪ್ರಾಯೋಗಿಕ ತರಬೇತಿಗೆ ಅನುಮತಿ.

ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿನ ಸ್ವಿಮಿಂಗ್ ಪೂಲ್, ಸಿನಿಮಾ ಹಾಲ್, ಪಾರ್ಕ್ ಸೇರಿದಂತೆ ಇನ್ನಿತರ ಸೇವೆಗಳು ಸಾರ್ವಜನಿಕರಿಗೆ ಮುಕ್ತವಾಗಲಿವೆ. ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿಲ್ಲ. ಕೇವಲ ವಂದೇ ಭಾರತ್ ಮಿಷನ್ ನಡಿಯಲ್ಲಿ ವಿಮಾನಗಳು ಹಾರಾಟ ನಡೆಸಲಿವೆ.

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಅಥವಾ ರಾಜ್ಯ ಕೌಶಲ್ಯ ಅಭಿವೃದ್ಧಿ ಮಿಷನ್‍ನಲ್ಲಿ ನೋಂದಾಯಿಸಲಾದ ಅಲ್ಪಾವಧಿಯ ತರಬೇತಿ ಕೇಂದ್ರಗಳಲ್ಲಿ ಕೌಶಲ್ಯ ಅಥವಾ ಉದ್ಯಮಶೀಲತೆ, ವಾಣಿಜ್ಯೋದ್ಯಮ ಮತ್ತು ಸಣ್ಣ ಉದ್ಯಮ ಅಭಿವೃದ್ಧಿಗಾಗಿ ರಾಷ್ಟ್ರೀಯ ಸಂಸ್ಥೆ, ಭಾರತೀಯ ಉದ್ಯಮ ಸಂಸ್ಥೆಯ ತರಬೇತಿಯನ್ನು ಅನುಮತಿ ನೀಡಲಾಗಿದೆ.

Click to comment

Leave a Reply

Your email address will not be published. Required fields are marked *