Friday, 17th August 2018

Recent News

ಸೋಶಿಯಲ್ ಮೀಡಿಯಾದ ಡ್ಯಾನ್ಸ್ ಅಂಕಲ್ ಜೊತೆ ಗೋವಿಂದ ಸ್ಟೆಪ್!

ನವದೆಹಲಿ: ತಮ್ಮ ವಿಶಿಷ್ಟ ನೃತ್ಯದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು `ಡ್ಯಾನ್ಸ್ ಅಂಕಲ್’ ಎಂದೇ ಹೆಸರುಗಳಿಸಿದ್ದ ಭೋಪಾಲ್‍ನ ಪ್ರಾಧ್ಯಾಪಕರಾದ ಸಂಜೀವ್ ಶ್ರೀವತ್ಸರವರು ಮುಂಬೈನಲ್ಲಿ ಡ್ಯಾನ್ಸ್ ದೀವಾನ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ನಟ ಗೋವಿಂದ ಅವರನ್ನು ಭೇಟಿ ಮಾಡಿದ್ದಾರೆ.

ಇದೇ ವೇಳೆ ಬಾಲಿವುಡ್‍ನ ಖ್ಯಾತ ನಟ ಗೋವಿಂದ ಅವರೊಂದಿಗೆ ವೇದಿಕೆ ಹಂಚಿಕೊಂಡು ಎಲ್ಲರೂ ನಾಚುವಂತೆ ಇಬ್ಬರೂ ಹೆಜ್ಜೆ ಹಾಕಿದ್ದರು. ಇವರ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.

ಡ್ಯಾನ್ಸ್ ದೀವಾನ ನೃತ್ಯ ಸಂಚಿಕೆಯಲ್ಲಿ ಡ್ಯಾನ್ಸ್ ಅಂಕಲ್ ಹಾಗೂ ಅವರ ಪತ್ನಿಯೊಂದಿಗೆ ಕಾಣಿಸಿಕೊಂಡಿದ್ದರು. ಈ ಸಂಚಿಕೆಯಲ್ಲಿ ಬಾಲಿವುಡ್‍ನ ಖ್ಯಾತ ನಟಿ ಮಾಧುರಿ ದಿಕ್ಷಿತ್ ಹಾಗೂ ಖ್ಯಾತ ಕೊರಿಯೋಗ್ರಾಫರ್ ತುಶಾನ್ ಖಾಲಿಯ ಮತ್ತು ಚಿತ್ರ ನಿರ್ದೇಶಕ ಶಂಶಾಂಕ್ ಖೈತಾನ್ ಜಡ್ಜ್‍ಗಳಾಗಿದ್ದಾರೆ.

ಎಲೆಕ್ಟ್ರಾನಿಕ್ ವಿಭಾಗದ ಪ್ರಾಧ್ಯಾಪಕರಾದ ಇವರು 1987ರಲ್ಲಿ ತೆರೆಕಂಡ ಖುದ್ಗರ್ಜ್ ಚಿತ್ರದ `ಆಪ್ ಕೆ ಆ ಜಾನೆ ಸೆ’ ಹಾಡಿಗೆ ಹೆಜ್ಜೆಹಾಕಿದ್ದರು. ಈ ಚಿತ್ರದಲ್ಲಿ ಗೋವಿಂದ ಹಾಗೂ ನಿಲಮ್ ಕೋಠಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭಾರೀ ಜನಪ್ರಿಯಗೊಂಡಿತ್ತು.

ಮದುವೆ ಸಮಾರಂಭದಲ್ಲಿ ಸಂಜೀವ್ ಶ್ರೀವತ್ಸ್ ಅವರು ಹೆಜ್ಜೆ ಹಾಕಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ ಬಾಲಿವುಡ್‍ನ ದಿಗ್ಗಜರು ಅಂಕಲ್‍ಗೆ ಅಭಿನಂದನೆ ಸಲ್ಲಿಸಿದ್ದರು. ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ದಸ್ ಕಾ ಧಮ್ ಕಾರ್ಯಕ್ರಮದಲ್ಲಿಯೂ ಈ ಮೊದಲು ಕಾಣಿಸಿಕೊಂಡಿದ್ದರು.ಇದನ್ನೂ ಓದಿ: ವಯಸ್ಸು ನಂಬರ್ ಅಷ್ಟೇ ಎನ್ನುವಂತೆ ಅಂಕಲ್ ಹಾಕಿದ್ರು ಸಖತ್ ಸ್ಟೆಪ್- ವಿಡಿಯೋ ವೈರಲ್

Leave a Reply

Your email address will not be published. Required fields are marked *