Connect with us

Bellary

ಎಫ್‍ಡಿಎ/ ಎಸ್‍ಡಿಎ ಪರೀಕ್ಷೆ- ಹಾಲ್ ಟಿಕೆಟ್‍ನಲ್ಲಿ ಎಚ್‍ಡಿಕೆ, ವಾಲಾ ಫೋಟೋ

Published

on

ಬಳ್ಳಾರಿ: ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸೋದು ಬಿಟ್ಟು ಸರ್ಕಾರಿ ನೌಕರಿ ಮಾಡಲು ಹೊರಟ್ರಾ, ರಾಜ್ಯಪಾಲ ವಜೂಭಾಯಿ ವಾಲಾ ರಾಜ್ಯಭಾರ ಮಾಡೋದು ಬಿಟ್ಟು ವಿಶ್ವ ವಿದ್ಯಾಲಯದಲ್ಲಿ ನೌಕರಿಗಾಗಿ ಅರ್ಜಿ ಸಲ್ಲಿಸಿದ್ರಾ ಅನ್ನೋ ಪ್ರಶ್ನೆಗಳು ಮೂಡಿದೆ.

ಹೌದು. ಯಾಕಂದ್ರೆ ಪರೀಕ್ಷಾ ಹಾಲ್ ಟಿಕೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾರ ಫೋಟೋಗಳಿರುವುದು ಕಂಡುಬಂದಿದೆ. ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಇವರ ಫೋಟೋ ಇದ್ದು ಇವರೇ ಪರೀಕ್ಷೆ ಬರೆದ್ರಾ ಅನ್ನೋ ಅನುಮಾನ ಮೂಡುತ್ತಿದೆ ಎಂದು ಹೋರಾಟಗಾರ ಮಂಜುನಾಥ್ ಹೇಳಿದ್ದಾರೆ.

ಎಫ್‍ಡಿಎ ಹಾಗೂ ಎಸ್‍ಡಿಎ ಪೋಸ್ಟ್‍ಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಯಾವೊಬ್ಬ ಅಭ್ಯರ್ಥಿಗಳ ಫೋಟೋಗಳಿಲ್ಲ. ಅದೂ ಅಲ್ಲದೆ ಹಾಲ್ ಟಿಕೆಟ್‍ನಲ್ಲಿ ಸಿಎಂ ಹಾಗೂ ರಾಜ್ಯಪಾಲರ ಫೋಟೋ ಇದ್ದರೂ ಯಾರೊಬ್ಬರು ಈ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಒಟ್ಟಿನಲ್ಲಿ ವಿವಿ ನೇಮಕಾತಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ನೇಮಕಾತಿ ಮಾಡಲಾಗುತ್ತಿದೆ ಅನ್ನೋ ಆರೋಪವಿದೆ. ಇದೀಗ ಪರೀಕ್ಷಾರ್ಥಿಗಳ ಹಾಲ್ ಟಿಕೆಟ್‍ನಲ್ಲಿ ಸ್ವತಃ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲರ ಫೋಟೋ ಪ್ರತ್ಯಕ್ಷವಾದ್ರೂ ವಿವಿ ಆಡಳಿತ ಮಂಡಳಿ ತನಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ಹೇಳಲಾಗುತ್ತಿದೆ.