Connect with us

Latest

ಟಿಕ್‍ಟಾಕ್, Helo ಸೇರಿದಂತೆ 59 ಆ್ಯಪ್ ಭಾರತದಲ್ಲಿ ಬ್ಯಾನ್

Published

on

ನವದೆಹಲಿ: ಟಿಕ್‍ಟಾಕ್ ಸೇರಿದಂತೆ 59 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.

ಚೀನಾ ಜೊತಗಿನ ಗಡಿ ಘರ್ಷಣೆ ನಡುವೆ ಭಾರತ ಸರ್ಕಾರ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಗಾಲ್ವಾನ ವ್ಯಾಲಿಯಲ್ಲಿ ಚೀನಾದ ಜೊತೆಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆ ಭಾರತದಲ್ಲಿ ಚೀನಾದ ವಸ್ತುಗಳ ಆಮದು ನಿಲ್ಲಿಸಬೇಕು. ಚೀನಾ ಆ್ಯಪ್ ಗಳನ್ನು ಬ್ಯಾನ್ ಮಾಡಬೇಕೆಂದ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

ಟಿಕ್‍ಟಾಕ್, ಯುಸಿ ಬ್ರೌಸರ್ ಸೇರಿದಂತೆ ಒಟ್ಟು 59 ಮೊಬೈಲ್ ಆ್ಯಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಇನ್ನು ಬಹುತೇಕರು ಸರ್ಕಾರದ ಆದೇಶದ ಮುನ್ನವೇ ಚೀನಾ ಮೂಲದ ಆ್ಯಪ್ ಗಳನ್ನು ತಮ್ಮ ಅನ್ ಇನ್‍ಸ್ಟಾಲ್ ಮಾಡಿಕೊಂಡಿದ್ದರು.