Connect with us

Latest

ಈ ಬಾರಿ ಸಂಸತ್‍ ನ ಚಳಿಗಾಲದ ಅಧಿವೇಶನ ನಡೆಯೋದು ಡೌಟ್

Published

on

ನವದೆಹಲಿ: ಈ ಬಾರಿ ಚಳಿಗಾಲದ ಸಂಸತ್ ಅಧಿವೇಶನ ನಡೆಯೋದು ಅನುಮಾನ ಎಂದು ಹೇಳಲಾಗ್ತಿದೆ. ಇದೇನಾದ್ರೂ ನಿಜವೇ ಆದಲ್ಲಿ ಹೀಗೆ ಆಗೋದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ.

ಗುಜರಾತ್-ಹಿಮಾಚಲ ಪ್ರದೇಶ ವಿಧಾಸಭೆ ಚುನಾವಣೆ, ರಾಜ್ಯದಲ್ಲಿ ಪರಿವರ್ತನೆ ಯಾತ್ರೆಗಳಲ್ಲಿ ಪ್ರಧಾನಿ ಮೋದಿ ಸೇರಿದಂತೆ ಇಡೀ ಸಂಪುಟ ಫುಲ್ ಬ್ಯುಸಿ ಇದೆ. ಕೇಂದ್ರ ಸಚಿವರು ಪುರುಸೊತ್ತು ಇಲ್ಲದಂತೆ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಚಳಿಗಾಲದ ಅಧಿವೇಶನ ನಡೆಸೋದು ಬೇಡ ಎಂಬ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ.

ಸಂವಿಧಾನದ ಪ್ರಕಾರ, ಎರಡು ಅಧಿವೇಶನಗಳ ನಡುವಿನ ಅಂತರ 6 ತಿಂಗಳು ಮೀರಬಾರದು. ಆದ್ರೆ ವರ್ಷದಲ್ಲಿ ಮೂರು ಬಾರಿ ಅಧಿವೇಶನ ಕರೆಯಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ಆದ್ರೂ ಇದುವರೆಗೂ ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ ಮತ್ತು ಚಳಿಗಾಲದ ಅಧಿವೇಶನ ನಡೆಸೋದು ಒಂದು ಸಂಪ್ರದಾಯವೇ ಆಗಿ ಹೋಗಿದೆ.

ಆದ್ರೆ ಈ ಬಾರಿ ಇದಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ. ಮಳೆಗಾಲದ ಸಂಸತ್ ಅಧಿವೇಶ ಆಗಸ್ಟ್ 11ಕ್ಕೆ ಮುಗಿದಿತ್ತು. ಹೀಗಾಗಿ ಮುಂದಿನ ಅಧಿವೇಶನ ನಡೆಸೋದಕ್ಕೆ ಫೆಬ್ರವರಿವರೆಗೂ ಸರ್ಕಾರಕ್ಕೆ ಟೈಂ ಇದೆ. ಈ ಬಗ್ಗೆ ವಿಪಕ್ಷಗಳು ತಕರಾರು ತೆಗೆದಲ್ಲಿ ಡಿಸೆಂಬರ್‍ನಲ್ಲಿ 10 ದಿನ ಅಧಿವೇಶನ ಕರೆಯಲು ಸಹ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

 

Click to comment

Leave a Reply

Your email address will not be published. Required fields are marked *