Friday, 20th September 2019

Recent News

ಸಾಧಕ ಕೋತಿರಾಜ್‍ಗೆ ಸರ್ಕಾರ ಕಲ್ಪಿಸುತ್ತಿಲ್ಲ ಮನೆ ಭಾಗ್ಯ!

ಚಿತ್ರದುರ್ಗ: ತನ್ನ ಜೀವದ ಹಂಗು ತೊರೆದು ಮತ್ತೊಬ್ಬರ ಜೀವರಕ್ಷಣೆ ಮಾಡುವ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್‍ಗೆ ಕರ್ನಾಟಕ ಸರ್ಕಾರ ಈವರೆಗೆ ಮನೆ ಭಾಗ್ಯ ಕರುಣಿಸಿಲ್ಲ.

ಸತತ ನಾಲ್ಕು ವರ್ಷಗಳಿಂದ ಆಶ್ರಯ ಯೋಜನೆಯಡಿ ಮನೆ ಕಲ್ಪಿಸುವಂತೆ ಚಿತ್ರದುರ್ಗದಲ್ಲಿ ಅರ್ಜಿ ಸಲ್ಲಿಸುತ್ತಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ರಾಕ್ ಕ್ಲೈಮಿಂಗ್ ಹಾಗು ವಾಲ್ ಕ್ಲೈಮಿಂಗ್‍ನಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಸಾಧಿಸಿದ್ದಾರೆ. ಆದ್ರೆ ಈ ಸಾಧಕನಿಗೆ ಸೂರು ಕಲ್ಪಿಸುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ಈ ಸಾಧಕನ ಚಾತುರ್ಯತೆ ಗಮನಿಸಿರೊ ತಮಿಳುನಾಡು ಸರ್ಕಾರ ಅವರ ರಾಜ್ಯಕ್ಕೆ ಬರುವಂತೆ ಮನವಿ ಮಾಡಿದ್ದು, ಬರುವ ಒಲಂಪಿಕ್ಸ್ ನಲ್ಲಿ ತಮಿಳುನಾಡಿನಿಂದ ಸ್ಪರ್ಧಿಸುವಂತೆ ಕೇಳಿದ್ದಾರೆ.

ಆದ್ರೆ ಕೆಚ್ಚೆದೆಯ ಕನ್ನಡಭಿಮಾನ ತೋರಿರೋ ಕೋತಿರಾಜ್ ನಾನು ಹುಟ್ಟಿದ್ದು ತಮಿಳುನಾಡಾದರೂ, ನನ್ನನ್ನು ಸಾಕಿ ಬೆಳೆಸಿದ್ದು ಹೆಮ್ಮೆಯ ಕರ್ನಾಟಕ. ಹೀಗಾಗಿ ನಾನು ಕರುನಾಡಿಗಾಗಿ ಬದುಕುವೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಬರುವ ಒಲಂಪಿಕ್ಸ್ ನಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿ ಪದಕ ಗೆದ್ದು ತರುವೆ, ಕರ್ನಾಟಕದ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಮೊಳಗಿಸುವೆ ಎಂದು ಹೇಳಿದ್ದಾರೆ. ತನ್ನ ಕ್ರೀಡಾಭ್ಯಾಸದ ವೆಚ್ಚಕ್ಕಾಗಿ ತನ್ನ ಬಳಿಯಿದ್ದ ಓಮ್ನಿ ಕಾರೊಂದನ್ನು ಸಹ ಜ್ಯೋತಿರಾಜ್ ಮಾರಾಟ ಮಾಡಿದ್ದಾರೆ.

ರಾಜ್ಯದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಸಾಧಕ ಜ್ಯೋತಿರಾಜ್ ಅವರಿಗೆ ಈಗ ವಾಸಿಸಲು ಮನೆಯಿಲ್ಲದೇ ಕಂಗಾಲಾಗಿದ್ದಾರೆ. ಎಷ್ಟೇ ಬಾರಿ ಮನೆ ಕಟ್ಟಿಸಿಕೊಡುವಂತೆ ಅರ್ಜಿ ಸಲ್ಲಿಸಿದರೂ ಜಿಲ್ಲಾಡಳಿತ ಹಾಗು ನಗರಸಭೆ ಯಾವುದಕ್ಕೂ ಪ್ರತಿಕ್ರಿಯಿಸದೆ ಕಣ್ಮುಚ್ಚಿ ಕುಳಿತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *