Connect with us

Latest

600 ರೂ. ವಿಶೇಷ ಗೋಲ್ಡ್ ಪಾನ್ – ವೀಡಿಯೋ ವೈರಲ್

Published

on

ನವದೆಹಲಿ: ಪಾನ್ ಸೇವಿಸುವುದು ಎಂದರೆ ನಿಮಗೆ ಇಷ್ಟನಾ? ಪಾನ್ ಪ್ರಿಯರಿಗೆ ತಾಜಾ ಸುದ್ದಿಯೊಂದು ಇಲ್ಲಿದೆ. ಹೌದು ದೆಹಲಿಯ ಕೊನಾಟ್ ಎಂಬ ಪ್ರದೇಶದರಲ್ಲಿರುವ ಪಾನ್  ಪಾರ್ಲರ್‌ನಲ್ಲಿ  600 ರೂ.ಗಳ ವಿಶೇಷ ಗೋಲ್ಡ್ ಪಾನ್‍ನನ್ನು ಮಾರಾಟ ಮಾಡಲಾಗುತ್ತಿದೆ. ಸದ್ಯ ಈ ಪಾನ್ ವೀಡಿಯೋವನ್ನು ಇನ್ ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೀಡಿಯೋವನ್ನು ಯಮುಸ್ ಪಂಚಾಯತ್ ಎಂಬ ಖಾತೆಯಲ್ಲಿ ಶೇರ್ ಮಾಡಿದ್ದು, ಮಹಿಳೆಯೊಬ್ಬರು ಒಣಗಿದ ಖರ್ಜೂರ, ಏಲಕ್ಕಿ, ಸಿಹಿ ಚಟ್ನಿ, ಗುಲ್ಕಂಡ್, ಲವಂಗ ಮತ್ತು ಚೆರ್ರಿ ಬಿಟ್ , ತೆಂಗಿನ ಕಾಯಿ ತುರಿ ಸೇರಿದಂತೆ ಹಲವಾರು ಪದಾರ್ಥಗಳನ್ನು ಹಾಕಿ ಗೋಲ್ಡನ್ ಪಾನ್‍ನನ್ನು ತಯಾರಿಸುತ್ತಾರೆ. ಬಳಿಕ ಅದನ್ನು ಎಲೆಯಿಂದ ಮುಚ್ಚಿ ಗೋಲ್ಡನ್ ಪೇಪರ್‍ನಿಂದ ಸುತ್ತುತ್ತಾರೆ. ನಂತರ ಕಡ್ಡಿಗೆ ಚೆರ್ರಿ ಸೇರಿಸಿ ಎಲೆ ಮಧ್ಯೆ ಚುಚ್ಚುವುದನ್ನು ಕಾಣಬಹುದಾಗಿದೆ.

ಈ ರಾಫೆಲೋ ಗೋಲ್ಡ್ ಪಾನ್ ಬೆಲೆ 600 ರೂ. ಆಗಿದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾವಿರಕ್ಕೂ ಅಧಿಕ ವಿವ್ಸ್ ಬಂದಿದ್ದು, ನೆಟ್ಟಿಗರು ಕಮೆಂಟ್ ಸೆಕ್ಷನ್‍ನಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *