ಕೌಲಾಲಂಪುರ್: ಮೇಕೆಯೊಂದಿಗೆ ಸೆಕ್ಸ್ ಮಾಡಿ ವೃದ್ಧನೊರ್ವ ಸಿಕ್ಕಿಬಿದ್ದು, ಜೈಲು ಪಾಲಾಗಿರುವ ಘಟನೆ ಮಲೇಷಿಯಾದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಹ್ಯಾರಿ ಹಸನ್(60) ಮೇಕೆ ಜೊತೆಗೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಮೂಕ ಪ್ರಾಣಿಯೊಂದಿಗೆ ಕೆಟ್ಟ ವರ್ತನೆ ತೋರಿಸಿದ್ದಕ್ಕಾಗಿ, ಮೇಕೆ ಮಾಲೀಕರು ದೂರಿನ ಅನ್ವಯ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಈತ ಕೌಲಾಲಂಪುರದಿಂದ 18 ಮೈಲುಗಳಷ್ಟು ದೂರವಿರುವ ರಾವಾಂಗ್ನಲ್ಲಿ ವಾಸಿಸುತ್ತಿದ್ದನು. ಒಂದು ದಿನ ಮನೆಯ ಹಿಂಭಾಗಹದಲ್ಲಿ ನಾಯಿಯೊಂದು ಬೊಗಳುತ್ತಿರುವ ಶಬ್ಧ ಕೇಳಿಸಿತು. ಇದನ್ನು ಕಂಡ ನೆರೆ ಮನೆಯವರು ವ್ಯಕ್ತಿಯೋರ್ವ ಮೇಕೆಯೊಂದಿಗೆ ಸೆಕ್ಸ್ ಮಾಡುತ್ತಿರುವುದನ್ನು ಕಂಡಿದ್ದಾರೆ. ಹ್ಯಾರಿ ಹಸನ್ನಿಂದಾಗಿ ಮೇಕೆ ಸಾವನ್ನಪ್ಪಿದೆ. ಮನೆಯ ಹಿಂಭಾಗ ಅರೆ ಬೆತ್ತಲೆಯಲ್ಲಿ ಹಸನ್ ಸಿಕ್ಕಿಬಿದ್ದ ಕಾರಣ ಮನೆಯ ಮಾಲೀಕರು ಹ್ಯಾರಿ ಮೇಲೆ ದೂರು ನೀಡಿದರು. ಇದನ್ನೂ ಓದಿ: ಅಪ್ಪು ಚಿತ್ರದ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತರೆ ಕಲಾವಿದರ ತಂಡ
ಕೌಲಾ ಕುಬು ಬರು ನ್ಯಾಯಾಲಯದಲ್ಲಿ ಹ್ಯಾರಿ ಹಸನ್ ಪ್ರಾಣಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದ ಮೇಲೆ ಜೈಲು ವಾಸದ ಜೊತೆಗೆ ದಂಡವನ್ನು ತೆರೆಬೇಕಾಗಿ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ