Cinema

ಹಲ್ಲೆ ಮಾಡಿ, ಕಿರುಕುಳ ನೀಡುತ್ತಿದ್ದಾನೆ – ಗಂಡನ ವಿರುದ್ಧ ಪೂನಂ ಪಾಂಡೆ ದೂರು

Published

on

Share this

– 2 ವಾರದ ಹಿಂದೆ ಮದ್ವೆಯಾಗಿ ಪತಿಯನ್ನು ಜೈಲಿಗೆ ಅಟ್ಟಿದ ನಟಿ

ಪಣಜಿ: ಎರಡು ವಾರದ ಹಿಂದೆ ಮದುವೆಯಾಗಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ, ಈಗ ತನ್ನ ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳೆದ ಸೆಪ್ಟೆಂಬರ್ 11ರಂದು ಪೂನಂ ಪಾಂಡೆ ತನ್ನ ಗೆಳಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದರು. ಆದರೆ ಇಂದು ಅದೇ ಸ್ಯಾಮ್ ಬಾಂಬೆ ನನಗೆ ಕಿರುಕುಳ ನೀಡುತ್ತಿದ್ದಾನೆ, ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಗೋವಾದಲ್ಲಿ ಸೋಮವಾರ ರಾತ್ರಿ ದೂರು ನೀಡಿದ್ದಾರೆ.

ಸದ್ಯ ಗೋವಾದ ಕೆನಕೋನಾದಲ್ಲಿ ಪೂನಂ ಪಾಂಡೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಇಂದು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಕೆನಕೋನಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ತುಕಾರಂ ಚವಾನ್, ಪೂನಂ ಪಾಂಡೆಯವರು ಸೋಮವಾರ ರಾತ್ರಿ ಠಾಣೆಗೆ ಬಂದು ತಮ್ಮ ಪತಿ ಸ್ಯಾಮ್ ಬಾಂಬೆ ವಿರುದ್ಧ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದಾರೆ. ಜೊತೆಗೆ ಹಲ್ಲೆ ಮಾಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಆತನನ್ನು ನಾವು ಬಂಧಿಸಿದ್ದೇವೆ. ಆಕೆಗೆ ನಾವು ವೈದ್ಯಕೀಯ ಪರೀಕ್ಷೆ ಮಾಡಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

View this post on Instagram

❤️

A post shared by Poonam Pandey Bombay (@ipoonampandey) on

ಸೆಪ್ಟೆಂಬರ್ 11ರಂದು ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಪೂನಂ ಪಾಂಡೆ ತನ್ನ ಗೆಳಯ ಸ್ಯಾಮ್ ಬಾಂಬೆಯನ್ನು ಮದುವೆಯಾಗಿದ್ದರು. ಈ ವಿಚಾರವನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಮೂಲಕ ತಿಳಿಸಿದ್ದರು. ಆದರೆ ಈಗ ಮದುವೆಯಾದ ಎರಡೇ ವಾರದಲ್ಲಿ ಪತಿಯನ್ನು ಅರೆಸ್ಟ್ ಮಾಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement