Connect with us

Crime

ಗರ್ಲ್‍ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಳ್ಳದ ಮಗ- 7 ಬೈಕ್ ಸುಟ್ಟ ತಂದೆ

Published

on

– ಗೆಳತಿಯನ್ನು ಬಿಡಲ್ಲವೆಂದು ಮಗ ಹಠ

ಚೆನ್ನೈ: ಮಗ ತನ್ನ ಗೆಳತಿಯರೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ಒಪ್ಪದ್ದಕ್ಕೆ 52 ವರ್ಷದ ವ್ಯಕ್ತಿ 7 ಬೈಕ್‍ಗಳನ್ನು ಸುಟ್ಟಿರುವ ಘಟನೆ ನಡೆದಿದೆ.

ತಮಿಳುನಾಡಿನ ಚೆನ್ನೈನ ವಾಷರ್‍ಮ್ಯಾನ್‍ಪೇಟೆಯಲ್ಲಿ ಘಟನೆ ನಡೆದಿದ್ದು, 52 ವರ್ಷದ ಆಟೋ ಚಾಲಕ 7 ಬೈಕ್‍ಗಳನ್ನು ಸುಟ್ಟಿದ್ದಾನೆ. ಅಕ್ಟೋಬರ್ 14ರಂದೇ ಘಟನೆ ನಡೆದಿದ್ದು, ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಚಾಲಕನನ್ನು ಕರ್ಣನ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಸ್ಥಳೀಯ ಕೋರ್ಟ್‍ಗೆ ಹಾಜರುಪಡಿಸಲಾಗಿದೆ. ಡಿಸೆಂಬರ್ 12ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರ್ಣನ್ ಮಗನನ್ನು ಅರುಣ್ ಎಂದು ಗುರುತಿಸಲಾಗಿದ್ದು, ಈತ ಯುವತಿ ಮೀನಾ(ಹೆಸರು ಬದಲಿಸಲಾಗಿದೆ) ಜೊತೆ ಲೀವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು, ಇದು ಕರ್ಣನ್‍ಗೆ ಇಷ್ಟವಿರಲಿಲ್ಲ. ಹೀಗಾಗಿ ಮೀನಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುವಂತೆ ಮಗನಿಗೆ ತಿಳಿಸಿದ್ದಾನೆ. ಆದರೆ ಇದಕ್ಕೆ ಮಗ ಒಪ್ಪಿಲ್ಲ.

ಘಟನೆ ಹೇಗೆ ನಡೀತು?
ತಾನು ಗಿಫ್ಟ್ ನೀಡಿದ ಬೈಕ್‍ನಲ್ಲಿ ಮಗ ಮೀನಾಳನ್ನು ಕೂರಿಸಿಕೊಂಡು ಹೊರಟಿದ್ದನ್ನು ನೋಡಿ ಕರ್ಣನ್ ತೀವ್ರ ಕೋಪಗೊಂಡಿದ್ದ. ಹೀಗಾಗಿ ಬೈಕ್‍ನನ್ನು ನಾಶ ಮಾಡಲು ನಿರ್ಧರಿಸಿದ್ದ. ಅಕ್ಟೋಬರ್ 14ರಂದು ಪೆಟ್ರೋಲ್ ಸುರಿದು ಬೈಕ್ ಸುಟ್ಟು ಹಾಕಿದ್ದ. ಆಕಸ್ಮಿಕ ಬೆಂಕಿ ಅವಘಡ ಎಂದು ಬಿಂಬಿಸಲು ಅರುಣ್ ಬೈಕ್ ಬಳಿ ನಿಲ್ಲಿಸಲಾಗಿದ್ದ ಇತರ 7 ಬೈಕ್‍ಗಳಿಗೂ ಬೆಂಕಿ ಹಚ್ಚಿ ಪರಾರಿಯಾಗಿದ್ದ.

ಆರಂಭದಲ್ಲಿ ಪೊಲೀಸರು ಸಹ ಪ್ರಕರಣ ಬೇಧಿಸಲು ಸಾಧ್ಯವಾಗಿರಲಿಲ್ಲ. ಸಿಸಿಟಿವಿ ಕ್ಯಾಮೆರಾದ ವಿಡಿಯೋ ಪರಿಶೀಲಿಸಿದರೂ ಈ ಕುರಿತು ಸುಳಿವು ಸಿಕ್ಕಿರಲಿಲ್ಲ. ಬಳಿಕ ಸ್ವತಃ ಮೀನಾ ಅವರೇ ಸ್ವತಃ ದೂರು ನೀಡಿದರು. ಸ್ನೇಹಿತನ ತಂದೆಯಿಂದ ನನಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸರು ಕರ್ಣನ್‍ನನ್ನು ಪತ್ತೆಹಚ್ಚಿದ್ದಾರೆ. ಕಡಲೂರು ಬಳಿ ಕರ್ಣನ್‍ನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಬೈಕ್‍ಗೆ ಬೆಂಕಿ ಹಚ್ಚಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in