Tuesday, 25th June 2019

ಉತ್ತರ ಪತ್ರಿಕೆಯಲ್ಲಿ ಬಾಲಕಿ ಬರೆದಳು ಎಲ್ಲರೂ ಬೆಚ್ಚಿಬೀಳಿಸುವ ಸತ್ಯ

ಗುರುಗ್ರಾಮ: ಅಪ್ರಾಪ್ತೆಯೊಬ್ಬಳು ತನಗಾಗಿರುವ ಅತ್ಯಾಚಾರದ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ಎಲ್ಲರನ್ನು ಬೆಚ್ಚಿಬೀಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ

15 ವರ್ಷದ ಅಪ್ರಾಪ್ತೆಯೊಬ್ಬಳು ತಾನೂ ಅತ್ಯಾಚಾರಕ್ಕೆ ಒಳಗಾಗಿರುವ ಬಗ್ಗೆ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಳು. ಸದ್ಯ ಬಾಲಕಿಗೆ ಆದ ಅನ್ಯಾಯ ಈಗ ಬೆಳಕಿಗೆ ಬಂದಿದ್ದು, ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ನಾನು ಈಗ 10ನೇ ತರಗತಿ ಓದುತ್ತಿದ್ದೇನೆ. ನನ್ನ ಅಪ್ರಾಪ್ತ ಸಹೋದರ ಹಾಗೂ 23 ವರ್ಷದ ಬಾದಶಾಪುರ ಯುವಕನೊಬ್ಬ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಬಾಲಕಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೆದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಅಕ್ಟೋಬರ್ 1ರಂದು ಬಾಲಕಿ ತನ್ನ ಮೇಲೆ ಆಗಿರುವ ಅತ್ಯಾಚಾರದ ಬಗ್ಗೆ ಬರೆದಿದ್ದಳು. ಆಗ ಶಾಲೆಯ ಸಿಬ್ಬಂದಿಯವರು ಬಾಲಕಿಯ ಉತ್ತರ ಪತ್ರಿಕೆ ನೋಡಿ ಆಕೆಗೆ ಆಗಿರುವ ಅನ್ಯಾಯವನ್ನು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಪೊಲೀಸರು ಪೋಸ್ಕೋ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪ್ರಾಪ್ತ ಬಾಲಕ ಹಾಗೂ ಯುವಕ ಈ ಕೃತ್ಯವೆಸಗಿದ್ದು, ಇಬ್ಬರಲ್ಲಿ ಒಬ್ಬ ಬಾಲಕಿಗೆ ಸಹೋದರ ಆಗಬೇಕು. ಬಾಲಕಿಯ ತಾಯಿ ಹಾಗೂ ಆರೋಪಿಯ ತಾಯಿ ಸಹೋದರಿಯರು ಎಂದು ತಿಳಿದು ಬಂದಿದೆ. ಸದ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಎಸಿಪಿ ಶಕುಂತಲಾ ಯಾದವ್ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *