Tuesday, 21st May 2019

ಏರ್ ಶೋ ಬೆಂಕಿ ಅವಘಡದಲ್ಲಿ ಪವಾಡಸದೃಶ ಪಾರಾದ ಬಾಲಕಿ!

ಬೆಂಗಳೂರು: ಏರ್ ಶೋ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಾದ ಬೆಂಕಿ ಅನಾಹುತದಿಂದ ಬಾಲಕಿಯೊಬ್ಬಳು ಪವಾಡ ರೀತಿಯಲ್ಲಿ ಪಾರಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಏರ್ ಶೋ ನೋಡಲು ಬಂದಿದ್ದ ಕಿರಣ್ ಸಿಂಗ್ ಎಂಬವರ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಂದು ಏರ್ ಶೋ ನೋಡಲು ಕಿರಣ್ ಸಿಂಗ್ ಕುಟುಂಬ ಸಮೇತರಾಗಿ ಹೋಗಿದ್ದರು. ಆದರೆ ಸ್ಥಳದಲ್ಲಿ ಬಿಸಿಲು ತುಂಬಾ ಇದ್ದ ಕಾರಣ ಕಿರಣ್ ಅವರ ಮಗಳು ಕಾರಿನಲ್ಲಿ ಮಲಗಿರುತ್ತೇನೆ ಎಂದು ಹೋಗಿದ್ದಳು. ಬಳಿಕ ಬೆಂಕಿ ಅನಾಹುತ ನಡೆಯುವ ಅರ್ಧ ಗಂಟೆಯ ಮೊದಲಷ್ಟೇ ಮಗಳನ್ನು ಕಾರಿನಿಂದ ಕಿರಣ್ ಸಿಂಗ್ ಕರೆದುಕೊಂಡು ಹೋಗಿದ್ದರು. ನಂತರ ಪುನಃ ಬಂದು ನೋಡುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು. ಕಾರು ಹೋದರು ಚಿಂತೆ ಇಲ್ಲ. ಮಗಳು ಬದುಕಿ ಉಳಿದಿದ್ದೇ ಸಾಕು ಎಂದು ತಂದೆ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ:ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

ಪಬ್ಲಿಕ್ ಟಿವಿ ಜೊತೆ ಘಟನೆ ಕುರಿತು ಕರೆ ಮಾಡಿ ಮಾತನಾಡಿದ ಕಿರಣ್ ಸಿಂಗ್, ಯಾಕೋ ಸುಸ್ತಾಗುತ್ತಿದೆ ಎಂದು ಮಗಳು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ನಮ್ಮ ಹೋಂಡಾ ಸಿಟಿ ಕಾರಿನೊಳಗೆ ಹೋಗಿ ಮಲಗಿದ್ದಳು. ಬಳಿಕ ಅನಾಹುತ ನಡೆಯುವ ಕೇವಲ ಅರ್ಧ ಗಂಟೆ ಮುನ್ನವಷ್ಟೇ ನನ್ನ ಪತ್ನಿ ಮಗಳನ್ನು ಕರೆತರಲು ಹೇಳಿದ್ದಕ್ಕೆ ಕಾರ್ ಬಳಿ ಹೋಗಿ ಶೋ ನೋಡಲು ಆಕೆಯನ್ನು ವಾಪಾಸ್ ಕರೆದುಕೊಂಡು ಬಂದೆ. ಅದೃಷ್ಟವಶಾತ್ ದೇವರ ಧಯೆಯಿಂದ ನಮ್ಮ ಮಗಳು ಉಳಿದಳು ಎಂದು ತಿಳಿಸಿದರು. ಇದನ್ನೂ ಓದಿ:1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

ಏರೋ ಇಂಡಿಯಾ 2019ರ ಏರ್ ಶೋ ಅಗ್ನಿ ಅವಘಡ ಸಂಭವಿಸಿದ್ದು, ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ಬಂದಿದೆ. ಆದರೆ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಾರ್ವಜನಿಕರಿಗೆ ಸ್ಥಳಕ್ಕೆ ಅವಕಾಶ ನೀಡಲಾಗುವುದು ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಏರ್ ಶೋ ನಡೆಯುತ್ತಿರುವ ಕಾರಣ ಸ್ಥಳದಲ್ಲಿ 1 ಸಾವಿರ ಕಾರುಗಳು ಪಾರ್ಕ್ ಮಾಡಲಾಗಿತ್ತು. ಶೋಗೆ ಹೆಚ್ಚಿನ ಜನರು ಆಗಮಿಸಿದ ಕಾರಣ ಕಾರುಗಳನ್ನು ಮೈದಾನದಂತಹ ಪ್ರದೇಶದಲ್ಲಿ ತಾತ್ಕಾಲಿವಾಗಿ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಥಳದಲ್ಲಿ ಹುಲ್ಲು ಹೆಚ್ಚಾಗಿರುವುದರಿಂದ ಗಾಳಿಗೆ ಬೆಂಕಿ ಬಹುಬೇಗ ಹರಡಿದೆ. ಪರಿಣಾಮ 300ಕ್ಕೂ ಹೆಚ್ಚು ಕಾರುಗಳು ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *