Connect with us

ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಹೆಮ್ಮೆ. ಅವರು ತನ್ನ ಹಿಂದಿನ ದಿನಗಳ ಕುರಿತು ಮುಚ್ಚಿಡದೇ ಎಲ್ಲವನ್ನು ಹೇಳಿಕೊಂಡಿದ್ದಾರೆ ಎನ್ನುವ ಮೂಲಕ ಜಮ್ಮು ಕಾಶ್ಮೀರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿದ್ದಾರೆ.

ಗುಜ್ಜರ್ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಆಜಾದ್, ನಾನು ನಮ್ಮ ದೇಶದ ಹಲವು ನಾಯಕರ ಬಗ್ಗೆ ಹೆಮ್ಮೆ ಪಡುತ್ತೇನೆ. ಅದರಲ್ಲೂ ನನ್ನಂತೆ ಗ್ರಾಮೀಣ ಪ್ರದೇಶಗಳಿಂದ ಬಂದು ರಾಜಕೀಯದಲ್ಲಿರುವವರು ಹಲವು ನಾಯಕರಿದ್ದಾರೆ. ನಮ್ಮ ದೇಶದ ಪ್ರಧಾನಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ದೇಶದ ಜನರು ಪ್ರಧಾನಿಯನ್ನು ನೋಡಿ ಹಲವು ವಿಷಯಗಳನ್ನು ಕಲಿಯಬೇಕಿದೆ. ಅವರು ಪ್ರಧಾನಿಯಾಗಿದ್ದರೂ ತಮ್ಮ ಹಿಂದಿನದಿನಗಳಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಬಗ್ಗೆ ಹೆಮ್ಮೆಯಿಂದ ನಾನು ಚಾಯ್ ವಾಲಾ ಎಂದುಕೊಂಡಿದ್ದಾರೆ. ಮೋದಿ ತನ್ನ ಹಿಂದಿನ ಕಾಯಕವನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವುವು ಅವರ ಒಳ್ಳೆಯ ಗುಣ ಎಂದಿದ್ದಾರೆ.

ಕೊರೊನಾ ಮತ್ತು ಅರ್ಟಿಕಲ್ 370 ರಿಂದ ಜಮ್ಮು ಕಾಶ್ಮೀರ ಆರ್ಥಿಕವಾಗಿ ಕುಸಿದಿದೆ. ಇದರಿಂದ ಜಮ್ಮು ಕಾಶ್ಮೀರಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕಾಗಿದೆ. ಹಾಗೂ ಹೆಚ್ಚಿನ ಅನುದಾನವನ್ನು ನೀಡಿ ಕೈಗಾರಿಕೆಗಳನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಕೆಲದಿನಗಳ ಹಿಂದೆ ರಾಜ್ಯಸಭೆಯಿಂದ ನಿವೃತ್ತಿಯಾದ ಆಜಾದ್ ಅವರ ಕೆಲಸವನ್ನು ಶ್ಲಾಘಿಸಿ ಪ್ರಧಾನಿ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದರು.

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊಂದಿರುವ 23 ಸದಸ್ಯರ ಗುಂಪಿನಲ್ಲಿರುವ ಆಜಾದ್ ಈಗಾಗಲೇ ಪಕ್ಷವನ್ನು ಆರಂಭದಿಂದ ಸಂಘಟಿಸಬೇಕು ಎಂದು ಹೇಳುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ ಹೈಕಮಾಂಡ್ ನಾಯಕರೇ ಹುಬ್ಬೇರುವಂತೆ ಮಾಡಿದ್ದಾರೆ.

Advertisement
Advertisement