Thursday, 16th August 2018

Recent News

ಕಾಮುಕರಿಂದ ಮಕ್ಕಳನ್ನು ರಕ್ಷಿಸಲು ತಾಯಿಯ ಮಾಸ್ಟರ್ ಪ್ಲಾನ್

ಲಕ್ನೋ: ದೇಶದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಪೋಷಕರು ಸಹ ತಮ್ಮ ಮುದ್ದು ಮಕ್ಕಳ ರಕ್ಷಣೆ ಬಗ್ಗೆ ಚಿಂತಿತರಾಗಿದ್ದಾರೆ. ಹಲವು ಪೋಷಕರು ತಾವಿಲ್ಲದ ಸಮಯದಲ್ಲಿ ಮಕ್ಕಳನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಯೋಚನೆಯಲ್ಲಿದ್ದಾರೆ.

ಉತ್ತರಪ್ರದೇಶ ರಾಜ್ಯದ ಘಾಜಿಯಾಬಾದ್ ಮೂಲದ ಮಹಿಳೆ ತಮ್ಮ ಮಕ್ಕಳನ್ನು ಕಾಮುಕರಿಂದ ರಕ್ಷಿಸಲು ಪ್ಲಾನ್ ಮಾಡಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ.

ಏನದು ಮಾಸ್ಟರ್ ಪ್ಲಾನ್: ತಾಯಿ ರಹಸ್ಯವಾಗಿ ಮಕ್ಕಳಿಗೆ ಒಂದು ಕೋಡ್ ವರ್ಡ್ ಮಾಡಿಕೊಟ್ಟಿದ್ದಾರೆ. ಮನೆಯಿಂದ ಹೊರಗಡೆ ಯಾರಾದ್ರೂ ಕರೆದ್ರೆ ಕೋಡ್ ವರ್ಡ್ ಕೇಳುವಂತೆ ತಾಯಿ ತಿಳಿಸಿದ್ದರು. ಅಪರಿಚಿತರು ಬಂದು ನಿಮ್ಮ ತಾಯಿ ಅಥವಾ ತಂದೆ ನಿಮ್ಮನ್ನು ಕರೆದ್ರೆ ಆ ವ್ಯಕ್ತಿ ನಾವು ಹೇಳಿರುವ ಕೋಡ್ ವರ್ಡ್ ತಿಳಿಸಿದ್ರೆ ಆತನ ಜೊತೆಗೆ ಹೋಗತಕ್ಕದ್ದು ಎಂದು ಮಕ್ಕಳಿಗೆ ಹೇಳಿದ್ದಾರೆ.

ಭಾನುವಾರ ಸಂಜೆ ಮಹಿಳೆಯ 12 ವರ್ಷದ ಮಗಳು ಚಿಪ್ಸ್ ತರಲು ಅಂಗಡಿಗೆ ಹೋಗಿದ್ದಾಳೆ. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿ ನಿಮ್ಮ ತಂದೆಗೆ ಅಪಘಾತವಾಗಿದ್ದು, ನಿಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಂತೆ ತಾಯಿ ಹೇಳಿದ್ರು ಅಂತಾ ಹೇಳಿದ್ದಾನೆ. ಆಗ ಬಾಲಕಿ ಕೋಡ್ ವರ್ಡ್ ಹೇಳುವಂತೆ ಕೇಳಿದ್ದಾನೆ. ಕೋಡ್ ವರ್ಡ್ ಎಂದ ಕೂಡಲೇ ಭಯಗೊಂಡ ಅಪರಿಚಿತ ತೊದಲಿದ್ದಾನೆ. ಬಾಲಕಿ ಇಷ್ಟಕ್ಕೆ ಸುಮ್ಮನಾಗದೇ ಕೋಡ್ ವರ್ಡ್ ಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾಗಲೇ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಪ್ರತಿ ತಿಂಗಳು ಕೋಡ್ ವರ್ಡ್ ಬದಲಾವಣೆ: ತಾಯಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಹೇಳಿಕೊಡುವ ಕೋಡ್ ವರ್ಡ್ ನ್ನು ಪ್ರತಿ ತಿಂಗಳು ಬದಲಾಯಿಸುತ್ತಿದ್ದರು. ಕೋಡ್ ವರ್ಡ್ ಬದಲಾಯಿಸಿದ ನಂತ್ರ ಪದೇ ಪದೇ ಹೇಳುವ ಮೂಲಕ ಅದು ಮಕ್ಕಳಿಗೆ ನೆನಪಿನಲ್ಲಿರುವಂತೆ ಮಾಡ್ತಿದ್ರು. ಮಹಿಳೆಯ ಪತಿ ನಗರದಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಆರಂಭದಲ್ಲಿ ಕೋಡ್ ವರ್ಡ್ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ರು. ಆದ್ರೆ ಭಾನುವಾರ ಮಗಳೊಂದಿಗೆ ನಡೆದ ಘಟನೆ ಬಳಿಕ ಎಚ್ಚೆತ್ತಿದ್ದಾರೆ.

ಏನದು ಸಿಕ್ರೇಟ್ ಕೋಡ್ ವರ್ಡ್: ತಾಯಿ ಮಕ್ಕಳಿಗೆ ನೆನಪಿನಲ್ಲಿರುವಂತೆ ಸರಳವಾದ ಕೋಡ್ ವರ್ಡ್ ನೀಡ್ತಿದ್ರು. ಸಾಮಾನ್ಯವಾಗಿ ಪ್ರತಿ ತಿಂಗಳು ಒಂದೊಂದು ದೇವರ ಹೆಸರು ಅಥವಾ ಸಣ್ಣ ನುಡಿಗಟ್ಟುಗಳನ್ನು ಹೇಳಿಕೊಡುತ್ತಿದ್ರು. ಸಂಖ್ಯೆಗಳನ್ನು ಕೋಡ್ ವರ್ಡ್ ಗಳನ್ನಾಗಿ ಬಳಸುವುದ್ರಿಂದ ಪತಿ ಮತ್ತು ಮಕ್ಕಳು ಮರೆಯಬಹುದು ಎಂಬ ಉದ್ದೇಶದಿಂದ ದೇವರ ಹೆಸರು ಬಳಕೆ ಮಾಡ್ತಿದ್ದಾರೆ.

Leave a Reply

Your email address will not be published. Required fields are marked *