Connect with us

Cricket

ಆರ್‌ಸಿಬಿ ಅಭಿಮಾನಿಗಳ ಹೃದಯ ಕದ್ದ ಗೇಲ್ ತಂದೆ

Published

on

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹ್ಯಾಟ್ ತೊಟ್ಟು ಕ್ರಿಸ್ ಗೇಲ್ ಅವರ ತಂದೆ ಹುಟ್ಟುಹಬ್ಬ ಆಚರಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕಳೆದ ಮೂರು ದಿನದ ಹಿಂದೆ ಗೇಲ್ ಅವರ ತಂದೆ, ಡಡ್ಲಿ ಗೇಲ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಕ್ರಿಸ್ ಗೇಲ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಗೇಲ್ ತಂದೆ ಆರ್‌ಸಿಬಿ ತಂಡದ ಹ್ಯಾಟ್ ಧರಿಸಿದ್ದಾರೆ. ಇದು ಬೆಂಗಳೂರು ನೆಟ್ಟಿಗರ ಹೃದಯ ಕದ್ದಿದ್ದು, ಪಂಜಾಬ್ ತಂಡದಲ್ಲಿ ಆಡುತ್ತಿದ್ದರೂ ಕ್ರಿಸ್ ಗೇಲ್ ಅವರು ಬೆಂಗಳೂರು ತಂಡದ ಮೇಲಿನ ಪ್ರೀತಿಯನ್ನು ಮರೆತ್ತಿಲ್ಲ ಎಂದು ಫ್ಯಾನ್ಸ್ ಕಮೆಂಟ್ ಹಾಕುತ್ತಿದ್ದಾರೆ.

 

View this post on Instagram

 

A post shared by KingGayle 👑 (@chrisgayle333)

ತಮ್ಮ ತಂದೆಯ ಹುಟ್ಟುಹಬ್ಬದ ವಿಚಾರವಾಗಿ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಗೇಲ್, ನಿಜವಾದ ಗೇಲ್, ಹುಟ್ಟು ಹಬ್ಬದ ಶುಭಾಶಯಗಳು ಅಪ್ಪ. ಕೊನೆಯಿಲ್ಲದ ಪ್ರೀತಿ ನಿಮಗೆ. ಮನೆಯಲ್ಲಿರುವ ನೈಟ್ ಕ್ಲಬ್ ನಿಮಗಾಗಿ ತೆರದಿದೆ. ಆದರೆ ನೃತ್ಯಗಾರ್ತಿಯರು ನಿಮ್ಮ ಆಯ್ಕೆಗೆ ಬಿಟ್ಟಿದೆ. ಲೀವಿಂಗ್ ದಿ ಲೈಫ್ ಅಪ್ಪ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ನಲ್ಲಿ ಗೇಲ್ ತಂದೆ ಆರ್‌ಸಿಬಿ ಹ್ಯಾಟ್ ತೊಟ್ಟು ಮಿಂಚಿದ್ದರು.

ಕ್ರಿಸ್ ಗೇಲ್ ಅವರು ಐಪಿಎಲ್‍ನಲ್ಲಿ ಮೊದಲ ಬಾರಿಗೆ 2011ರಲ್ಲಿ ಆರ್‌ಸಿಬಿ ಪರ ಬ್ಯಾಟ್ ಬೀಸಿದ್ದರು. 2011ರಿಂದ 2017ರವರೆಗೆ ಕ್ರಿಸ್ ಗೇಲ್ ಆರ್‌ಸಿಬಿ ಪರವಾಗಿಯೇ ಆಡಿದ್ದರು. ಆದರೆ 2018ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ ಅವರನ್ನು ಕೊಂಡುಕೊಂಡಿತ್ತು. ಈಗ ಕಳೆದ ಎರಡು ವರ್ಷದಿಂದ ಗೇಲ್ ಅವರು ಪಂಜಾಬ್ ತಂಡದ ಪರವಾಗಿ ಆಡುತ್ತಿದ್ದಾರೆ.

ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದ ಕ್ರಿಸ್ ಗೇಲ್, ಕೇವಲ ಏಳು ಪಂದ್ಯಗಳನ್ನು ಆಡಿ ಮೂರು ಅರ್ಧಶತಕದ ನೆರವಿನಿಂದ 288 ರನ್ ಸಿಡಿಸಿದ್ದರು. ಜೊತೆಗೆ ಇದೇ ಐಪಿಎಲ್‍ನಲ್ಲಿ ಸಿಕ್ಸರ್ ಬಾರಿಸಿ ಟಿ-20 ಮಾದರಿಯ ಕ್ರಿಕೆಟ್‍ನಲ್ಲಿ 1000 ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಮಾಡಿದ್ದಾರೆ. ಟಿ-20 ಪಂದ್ಯಗಳಲ್ಲಿ 13,584 ರನ್ ಸಿಡಿಸಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in