Connect with us

Cricket

ದಿನೇಶ್ ಕಾರ್ತಿಕ್ ಕ್ಯಾಪ್ಟನ್ಸಿ ಕೈಬಿಡಲು ನಿಜವಾದ ಕಾರಣ ಬಹಿರಂಗಪಡಿಸಿದ ಗಂಭೀರ್

Published

on

ಮುಂಬೈ: ಐಪಿಎಲ್ 2020ರ ಆವೃತ್ತಿಯ ಮಧ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಹೊಸ ಕ್ಯಾಪ್ಟನ್ ಆಗಮನವಾಗಿದ್ದು, ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ಸ್ಥಾನದಿಂದ ದೂರವಾಗಿದ್ದರು. ಇಂಗ್ಲೆಂಡ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಹೊಸ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.

ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸಲು ನಾಯಕತ್ವ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದರು. ಆದರೆ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯಲು ಬೇರೆಯದ್ದೇ ಕಾರಣವಿದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ನಾಯಕ ಗೌತಮ್ ಗಂಭಿರ್ ಅಭಿಪ್ರಾಯಪಟ್ಟಿದ್ದಾರೆ.

ಕೋಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಗಂಭೀರ್, ಟೂರ್ನಿಯ ನಡುವೆ ಕ್ಯಾಪ್ಟನ್ ಬದಲಾಯಿಸುವುದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ ಎಂದಿದ್ದಾರೆ. ಕ್ರಿಕೆಟ್ ಎಂಬುವುದು ಸಂಬಂಧಗಳಿಗೆ ಸಂಬಂಧಿಸಿದ ವಿಚಾರವಲ್ಲ, ಅದು ಆಟಕ್ಕೆ ಸಂಬಂಧಿಸಿದೆ. ಮಾರ್ಗನ್ ಕ್ಯಾಪ್ಟನ್ ಆಗುವುದರಿಂದ ಹೆಚ್ಚಿನ ಪ್ರಯೋಜನ ಇರುವುದಿಲ್ಲ. ಸೀಜನ್ ಆರಂಭದಲ್ಲೇ ಈ ನಿರ್ಧಾರ ಮಾಡಿದ್ದರೆ ಉತ್ತಮವಾಗಿರುತ್ತಿತ್ತು. ಕೋಚ್, ಕ್ಯಾಪ್ಟನ್ ನಡುವಿನ ಸಂಬಂಧವೂ ಉತ್ತಮವಾಗಿರುವುದು ಉತ್ತಮ ಎಂದಿದ್ದಾರೆ.

ವಿಶ್ವಕಪ್ ಗೆದ್ದ ತಂಡದ ಕ್ಯಾಪ್ಟನ್ ತಂಡದಲ್ಲಿದ್ದಾರೆ ಎಂದು ಪದೇ ಪದೇ ಹೇಳುವ ಮೂಲಕ ಕಾರ್ತಿಕ್ ಮೇಲೆ ಒತ್ತಡ ತರುವುದು ಬದಲು ಮೊದಲೇ ಮಾರ್ಗನ್‍ಗೆ ನಾಯಕತ್ವ ವಹಿಸಬಹುದಿತ್ತು. ಕಾರ್ತಿಕ್ ಬ್ಯಾಟಿಂಗ್ ಮೇಲೆ ಹೆಚ್ಚು ಗಮನಹರಿಸಲು ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಆತನ ನಾಯಕತ್ವದ ಮೇಲೆ ತಂಡದ ಮ್ಯಾನೇಜ್‍ಮೆಂಟ್ ಅಸಮಾಧಾನವಿದೆ ಎಂದು ಪದೇ ಪದೇ ಹೇಳುತ್ತಿದ್ದದ್ದು, ಆತನ ತೀರ್ಮಾನಕ್ಕೆ ಕಾರಣವಾಗಿದೆ ಎಂದು ಗಂಭೀರ್ ಹೇಳಿದ್ದಾರೆ.

ಕಳೆದ 8 ಪಂದ್ಯಗಳಲ್ಲಿ ಕಾರ್ತಿಕ್ 112 ರನ್ ಗಳಿಸಿದ್ದು, 58 ರನ್ ಆವೃತ್ತಿಯ ಅತ್ಯಾಧಿಕ ರನ್ ಆಗಿದೆ. ನಾಯಕತ್ವದ ಬದಲಾವಣೆಯ ಬಳಿಕವೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾರ್ಗನ್ ನಾಯಕತ್ವದ ಮೊದಲ ಪಂದ್ಯದಲ್ಲೂ ಮುಂಬೈ ವಿರುದ್ಧ 8 ವಿಕೆಟ್ ಸೋಲುಂಡಿತ್ತು.

Click to comment

Leave a Reply

Your email address will not be published. Required fields are marked *