Tuesday, 21st May 2019

Recent News

ಗೌರಿ ಹತ್ಯೆ ಪ್ರಕರಣ: ಎಸ್‍ಐಟಿ ವಶದಲ್ಲಿರೋ ಗಣೇಶ್ ಮಿಸ್ಕಿನ್ ತಾಯಿ ಆಸ್ಪತ್ರೆಗೆ ದಾಖಲು

– ಮತ್ತೋರ್ವ ಮಗನನ್ನು ವಿಚಾರಣೆಗೆ ಕರೆದ ಎಸ್‍ಐಟಿ

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ವಶದಲ್ಲಿರುವ ಗಣೇಶ್ ಮಿಸ್ಕಿನ್ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಣೇಶ್ ಮಿಸ್ಕಿನ್ ಸಹೋದರ ರವಿ ಮಿಸ್ಕಿನ್ ನನ್ನೂ ವಿಚಾರಣೆಗೆ ಒಳಪಡಿಸಿದ್ದಕ್ಕೆ ಭಯಗೊಂಡ ತಾಯಿ ಪುಷ್ಪಾವರು ಅಸ್ವಸ್ಥಗೊಂಡಿದ್ದಾರೆ. ಪ್ರಕರಣ ಸಂಬಂಧ ಎಸ್‍ಐಟಿ ವಶದಲ್ಲಿರುವ ಗಣೇಶ ಮಿಸ್ಕಿನ್ ಸಹೋದರ ರವಿ ಮಿಸ್ಕಿನ್ ಅವರನ್ನು ಶನಿವಾರ ರಾತ್ರಿ ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೆ ಬೆಂಗಳೂರಿಗೆ ಕರೆಸಿದ್ದರು. ಈ ಹಿನ್ನೆಲೆಯಲ್ಲಿ ಭಯಗೊಂಡ ತಾಯಿ, ಗಣೇಶನ ಹಾಗೇ ರವಿಯನ್ನು ಎಲ್ಲಿ ಬಂಧನ ಮಾಡುತ್ತಾರೆ ಎಂಬ ಭಯದಿಂದ ಸ್ಥಳದಲ್ಲಿ ಕುಸಿದು ಬಿದಿದ್ದಾರೆ.

ಇತ್ತ ತಾಯಿ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಕೂಡಲೇ ರವಿ, ಎಸ್‍ಐಟಿ ವಿಚಾರಣೆಗೆ ಹಾಜರಾಗದೇ ಅಮ್ಮನನ್ನು ಕಾಣಲು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಪುಷ್ಪಾ ಮಿಸ್ಕಿನ್ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಮಿಸ್ಕಿನ್, ಮೊದಲಿಗೆ ಸ್ಥಳೀಯ ಪೊಲೀಸರು ಕರೆ ಮಾಡಿ ವಿಚಾರಣೆಗೆ ಕರೆಸಿದ್ದರು. ನಂತರ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿನ ಎಸ್‍ಐಟಿ ಕಚೇರಿಗೆ ತೆರಳಬೇಕೆಂದು ಸೂಚಿಸಿದರು. ಅಧಿಕಾರಿಗಳ ಆದೇಶದಂತೆ ನಾನು ಮತ್ತು ನನ್ನ ಮಾವ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದವು. ಆದ್ರೆ ನಮ್ಮ ತಾಯಿಗೆ ನಿಮ್ಮ ಎರಡನೇ ಮಗನನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದೊಯ್ಯಿದಿದ್ದಾರೆ ಎಂಬ ಸುಳ್ಳು ಮಾಹಿತಿ ತಲುಪಿದೆ. ಕೂಡಲೇ ಎಲ್ಲಿ ಗಣೇಶ್‍ನನ್ನು ಬಂಧಿಸಿದಂತೆ ನನ್ನನ್ನು ಅರೆಸ್ಟ್ ಮಾಡಬಹುದು ಎಂದು ಭಯಭೀತರಾಗಿ ಸ್ಥಳದಲ್ಲಿ ಕುಸಿದಿದ್ದಾರೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply

Your email address will not be published. Required fields are marked *