Connect with us

Dakshina Kannada

ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಳ್ತಿದ್ದ ಗ್ಯಾಂಗ್ ಅರೆಸ್ಟ್

Published

on

ಮಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಬಲೆಗೆ ಬೀಳಿಸಿ ಲೈಂಗಿಕವಾಗಿ ಬಳಸಿಕೊಂಡು ನಂತರ ಬ್ಲಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನಗರದ ಅಪ್ರಾಪ್ತ ಬಾಲಕಿಯರು ಮತ್ತು ಯುವತಿಯರಿಗೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದ ನಟೋರಿಯಸ್ ತಂಡ ಇದಾಗಿದ್ದು, ಮಂಗಳೂರಲ್ಲಿ ಶಾಲೆ, ಧಾರ್ಮಿಕ ಕೇಂದ್ರಗಳು, ಒಂಟಿ ಮನೆಗಳು ಹೀಗೆ ವಿವಿಧ ಕಡೆ ಹೋಗಿ ಅಪ್ರಾಪ್ತ ಬಾಲಕಿಯರನ್ನು ಪ್ರೀತಿ ಪ್ರೇಮ ಅಂತ ಪುಸಲಾಯಿಸಿ ಅವರ ಖಾಸಗಿ ಫೋಟೋಗಳು ಮತ್ತು ವೀಡಿಯೋಗಳನ್ನು ಸಂಗ್ರಹಿಸಿ ಬಳಿಕ ಅದನ್ನು ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಇದೀಗ ಈ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ.

ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಕುರಾನ್ ಕಲಿಯಲು ಮದರಸ ಒಂದಕ್ಕೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನು ಈ ಗ್ಯಾಂಗ್ ತಮ್ಮ ಬಲೆಗೆ ಬೀಳಿಸಿತ್ತು. ಆಕೆಯ ನಗ್ನ ಫೋಟೋ ವೀಡಿಯೋಗಳನ್ನು ಕಳಿಸಿಕೊಂಡು ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ಕೊಡಲಾಗಿತ್ತು. ಮನೆಯವರಿಗೆ ವಿಚಾರ ಗೊತ್ತಾಗಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಗಿಳಿದ ಪೊಲೀಸರು ಮಹಮ್ಮದ್ ಮುನೀರ್, ತಸ್ಲೀಮ್ ಮತ್ತು ಮಹಮ್ಮದ್ ಸಾಬೀಲ್ ನನ್ನು ಬಂಧಿಸಿದ್ದಾರೆ. ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಕಾಮುಕ ಗ್ಯಾಂಗ್ ನ ರಹಸ್ಯ ಹೊರಬಿದ್ದಿದೆ.

ಅಪ್ರಾಪ್ತ ಬಾಲಕಿಯರು ತಮ್ಮ ಬಲೆಗೆ ಬಿದ್ದಾಗ ಈ ಗ್ಯಾಂಗ್ ನ ಕಾಮಪಿಶಾಚಿಗಳು ಬಾಲಕಿಯರಿಗೆ ಬ್ಲಾಕ್ ಮೇಲ್ ಮಾಡಿ, ತಾವು ಕರೆದ ಕಡೆ ಬರಬೇಕು. ಹೇಳಿದ ಹಾಗೆ ಮಾಡಬೇಕು. ಇಲ್ಲದಿದ್ದರೆ. ನಿಮ್ಮ ಖಾಸಗಿ ಫೋಟೋ ವೀಡಿಯೋಗಳನ್ನು ಮನೆಯವರಿಗೆ ಕೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಒಡ್ಡುತ್ತಿದ್ದರು. ಬಾಲಕಿಯರಿಗೆ ಈ ಗ್ಯಾಂಗ್ ಹೇಳಿದ ಹಾಗೆ ಕೇಳಿದ್ರೆ ಅವರ ಮೇಲೆ ದೌರ್ಜನ್ಯ ಎಸಗೋದು ಇವರ ದಂಧೆಯಾಗಿದೆ. ಇದೀಗ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದು, ಇನ್ನು ಉಳಿದ ಈ ಗ್ಯಾಂಗ್‍ನವರಿಗಾಗಿ ಪೊಲೀಸರು ತಲಾಶ್ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *