Wednesday, 20th February 2019

Recent News

ಒಂದೇ ಕೈ ಇದ್ರೂ ಲಾಂಗ್ ಹಿಡಿದು ದರೋಡೆ ಮಾಡ್ತಿದ್ದ ಗ್ಯಾಂಗ್‍ಲೀಡರ್ ಅಂದರ್!

ಬೆಂಗಳೂರು: ಒಂದೇ ಕೈ ಇದ್ದರೂ ಲಾಂಗ್, ಮಚ್ಚು ಹಿಡಿದು ಸಾರ್ವಜನಿಕರನ್ನು ಬೆದರಿಸಿ ದರೋಡೆ ಎಸಗುತ್ತಿದ್ದ ಗ್ಯಾಂಗ್ ಲೀಡರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ರೌಡಿ ಮನೋಜ್ ಅಲಿಯಾಸ್ ಮನುವನ್ನು ಈಗ ಬಸವೇಶ್ವರ ಪೊಲೀಸರು ಬಂಧಿಸಿದ್ದಾರೆ. ಒಂದೇ ಕೈಯಲ್ಲಿ ಲಾಂಗ್ ಹಿಡಿದು ದರೋಡೆಗೆ ಮಾಡುವ ಮೂಲಕ ನಿರ್ಜನ ಪ್ರದೇಶದಲ್ಲಿ ಓಡಾಡುವ ಜನರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುವ ಕಾಯಕ ಮಾಡಿಕೊಂಡಿದ್ದ.

ಈತ ಸ್ವತಃ ಗ್ಯಾಂಗ್‍ವೊಂದನ್ನು ಕೂಡ ಕಟ್ಟಿಕೊಂಡಿದ್ದು, ಪ್ರಮುಖವಾಗಿ ಸಾಫ್ಟ್ ವೇರ್ ಉದ್ಯೋಗಿಗಳನ್ನು ಗುರಿ ಮಾಡಿ ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಮೊಬೈಲ್ ಕಸಿದುಕೊಳ್ಳುವ ಕೃತ್ಯದಲ್ಲಿ ಈ ತಂಡ ಭಾಗಿಯಾಗಿತ್ತು.

ಈ ಗ್ಯಾಂಗ್ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುವ ಭಯಾನಕ ಕೃತ್ಯ ಬಸವೇಶ್ವರ ನಗರದ ವಾಟಾಳ್ ನಾಗರಾಜ್ ರಸ್ತೆಯ ಸಿಸಿಟಿವಿವೊಂದರಲ್ಲಿ ಸೆರೆಯಾಗಿದೆ. ಸದ್ಯ ಲಭ್ಯವಾಗಿರುವ ವಿಡಿಯೋ ಆಧರಿಸಿ ಬಸವೇಶ್ವರ ನಗರ ಪೊಲೀಸರು ಆರೋಪಿ ಮನೋಜ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಂದಹಾಗೇ ರೌಡಿ ಮನೋಜ್‍ಗೆ ಬಲಗೈ ಇಲ್ಲ. ಅದ್ರೂ ಎಡಗೈಯಲ್ಲಿ ಲಾಂಗ್ ಹಿಡಿಯುವ ಒಂಟಿ ಕೈ ರೌಡಿ ಮನೋಜ್ ಅಂಡ್ ಗ್ಯಾಂಗ್ ನ ತಡರಾತ್ರಿ ವಾಹನ ಸವಾರನ್ನು ಬೆದರಿಸಿ ದರೋಡೆ ಮಾಡುವ ವೃತ್ತಿ ಮಾಡಿಕೊಂಡಿದೆ. ರಾಜಾಜಿನಗರ, ಎಚ್‍ಎಸ್‍ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ದರೋಡೆ ಪ್ರಕರಣದಲ್ಲಿ ಈ ಗ್ಯಾಂಗ್ ಭಾಗಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *