Connect with us

Crime

ರಾತ್ರಿ ಗಸ್ತು ತಿರುಗುತ್ತಿದ್ದ ಗೂರ್ಖಾ ಮೇಲೆ ಕಳ್ಳರಿಂದ ಮಾರಣಾಂತಿಕ ಹಲ್ಲೆ

Published

on

– ಕಳ್ಳತನ ತಡೆಯಲು ಮುಂದಾಗಿದ್ದಕ್ಕಾಗಿ ಗಲಾಟೆ
– ರಕ್ತದ ಮಡುವಿನಲ್ಲಿ ನರಳಾಡಿದ ಗೂರ್ಖಾ

ಗದಗ: ಅಂಗಡಿ ಕಳ್ಳತನ ತಡೆಲು ಬಂದ ಗೂರ್ಖಾ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆಮಾಡಿ ಪರಾರಿಯಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ.

ನರಗುಂದ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ತಡರಾತ್ರಿಯಲ್ಲಿ ಗಸ್ತು ತಿರುಗುತ್ತಿದ್ದನು. ಈ ವೇಳೆ ಅಂಗಡಿ ಕಳ್ಳತನ ಮಾಡುತ್ತಿರುವುದು ಗೂರ್ಖಾ ಹರೀಶಸಿಂಗ್ ಸೌಧ್ ಗಮನಕ್ಕೆ ಬಂದಿದೆ. ಈ ಕಳ್ಳತನವನ್ನು ತಡೆಯಲು ಮುಂದಾಗಿದ್ದದ್ದಾನೆ. ಆಗ ದುಷ್ಕರ್ಮಿಗಳು ಹರೀಶಸಿಂಗ್ ತಲೆ ಹಾಗೂ ಕಣ್ಣಿನ ಭಾಗಕ್ಕೆ ರಾಡ್ ನಿಂದ ಹೊಡೆದು ಗಾಯಗೊಳಿಸಿದ್ದಾರೆ. ದುಷ್ಕರ್ಮಿಗಳು ನಡೆಸಿರುವ ಹಲ್ಲೆಯಿಂದಾಗಿ ರಕ್ತದ ಮಡುವಿನಲ್ಲಿ ಗೂರ್ಖಾ ನರಳಾಡಿದ್ದಾನೆ.

ಗೂರ್ಖಾನ ನರಳಾಟವನ್ನು ಗಮನಿಸಿದವರು ಆತನನ್ನು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಿಂಧ್‍ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಗಾಯಾಳು ಗೂರ್ಖಾನಿಂದ ಇನ್ನಷ್ಟು ಮಾಹಿತಿ ಕಲೆ ಹಾಕಿದ್ದಾರೆ. ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Click to comment

Leave a Reply

Your email address will not be published. Required fields are marked *