Connect with us

Crime

ಟಾಟಾ ಏಸ್ ವಾಹನ ಮಗುಚಿ ಓರ್ವ ಸಾವು, ಐವರಿಗೆ ಗಾಯ

Published

on

ಗದಗ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟಾಟಾ ಏಸ್ ವಾಹನ ಮಗುಚಿ ಬಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, 5 ಜನ ಗಾಯಗೊಂಡಿರುವ ಘಟನೆ ಲಕ್ಷ್ಮೇಶ್ವರದ ಅಕ್ಕಿಗುಂದ ಗ್ರಾಮದ ಬಳಿ ನಡೆದಿದೆ.

ಈ ಅಪಘಾತದಲ್ಲಿ ರೂಪ್ಲಪ್ಪ ಲಮಾಣಿ(65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಕ್ಕಿಗುಂದ ಗ್ರಾಮದಿಂದ ಲಕ್ಷ್ಮೇಶ್ವರಕ್ಕೆ ವೇಗವಾಗಿ ಬರುವಾಗ ಚಾಲಕನ ನಿಯಂತ್ರಣ ವಾಹನ ಕಾಲುವೆಗೆ ಬಿದ್ದಿದೆ. ಈ ದುರ್ಘಟನೆಯಲ್ಲಿ ವಾಹನ ಜಖಂಗೊಂಡಿದ್ದು ಸಾವು ನೋವು ಸಂಭವಿಸಿದೆ.

ಘಟನೆಯಲ್ಲಿ ಗಾಯಗೊಂಡಿರುವ 5 ಜನರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *