Connect with us

Districts

‘ಚೀನಾ ಭಾರತವನ್ನು ನಾಶ ಮಾಡಲಿ’ – ಗದಗ್ ಯುವಕನ ಪೋಸ್ಟ್

Published

on

– ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ನಾಪತ್ತೆ

ಗದಗ: ಭಾರತ-ಚೀನಾ ಗಡಿ ವಿವಾದದಲ್ಲಿ 20 ಜನ ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆ ರೋಣ ಪಟ್ಟಣದ ಯುವಕನೊರ್ವ ಭಾರತೀಯ ಸೈನಿಕರ ಬಗ್ಗೆ ಅಶ್ಲೀಲ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಪಟ್ಟಣದ ಬಸವರಾಜ ಗೋಮಾಡಿ, ಬಸವರಾಜ್ ಯಶ್ ಎಂಬ ಹೆಸರಿನಿಂದ ಪೋಸ್ಟ್ ಹರಿಬಿಟ್ಟಿದ್ದಾನೆ. ಕರ್ನಾಟಕದ ಅದರಲ್ಲೂ ಶಾಂತಿನಾಡು ಗದಗ ಜಿಲ್ಲೆಯ ಯುವಕ ಚೀನಾ ಸೈನಿಕರಿಗೆ ಸಪೋರ್ಟ್ ಮಾಡಿದ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದೆ. ‘ಹೆಚ್ಚೆಚ್ಚು ಭಾರತೀಯ ಸೈನಿಕರನ್ನು ಚೀನಾದವರು ಕೊಲ್ಲಲಿ ಈ ದರಿದ್ರ ಭಾರತವನ್ನು ಸರ್ವನಾಶ ಮಾಡಲಿ’ ಎಂಬ ಪೋಸ್ಟ್, ಸೈನಿಕರನ್ನು ಹಾಗೂ ದೇಶಾಭಿಮಾನಿಗಳನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

ಭಾರತೀಯ ಸೈನಿಕರ ಬಗ್ಗೆ ಅಶ್ಲೀಲ ಪೋಸ್ಟ್ ಹರಿಬಿಟ್ಟ ದೇಶದ್ರೋಹಿ, ರೋಣ ಮುಲ್ಲನಭಾವಿ ಓಣಿಯಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದ. ಈಗ ಆರೋಪಿ ಬಸವರಾಜ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ದೇಶದ್ರೋಹಿ ಆರೋಪಿ ಬಸವರಾಜ್ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.