Connect with us

Crime

ಬ್ಲೇಡ್‍ನಿಂದ ಕುತ್ತಿಗೆ ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ

Published

on

ಗದಗ: ಬ್ಲೇಡ್‍ನಿಂದ ಕುತ್ತಿಗೆ ಕೊಯ್ದುಕೊಂಡು ಸೆಲ್ಫ್ ಸೂಸೈಡ್‍ಗೆ ಮುಂದಾದ ವ್ಯಕ್ತಿಯನ್ನು 108 ಸಿಬ್ಬಂದಿ ರಕ್ಷಿಸಿದ ಘಟನೆ ಗದಗನ ರಾಜೀವ್ ಗಾಂಧಿ ನಗರದಲ್ಲಿ ಕಂಡು ಬಂದಿದೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಚನ್ನಬಸಪ್ಪ ವೀರಪ್ಪ ತಳಕಲ್(35) ಎಂದು ಗುರುತಿಸಲಾಗಿದೆ. ಇವರು ಕೌಟುಂಬಿಕ ಕಲಹದಿಂದ ಬೆಸತ್ತು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಸೆಲ್ಫ್ ಸೂಸೈಡ್ ಪ್ರಯತ್ನಕ್ಕೆ ಸಂಬಂಧಿಸಿದ ಕರೆಬಂದ ತಕ್ಷಣವೇ ಗದಗ 108 ಅಂಬುಲೆನ್ಸ್ ಸಿಬ್ಬಂದಿ ಇಎಂಟಿ ಮಹೇಶ್ ಭಜಂತ್ರಿ ಮತ್ತು ಪೈಲೆಟ್ ಅಶೋಕ್ ನೀಲಗಾರ್ ಕಾರ್ಯಪ್ರವೃತ್ತರಾದ್ದಾರೆ.

1ನೇ ಮಹಡಿಯಲ್ಲಿ ಚನ್ನಬಸಪ್ಪ ಬ್ಲೇಡ್ ನಿಂದ ಕುತ್ತಿಗೆ ಭಾಗವನ್ನು ಶ್ವಾಸನಾಳ(ಟ್ರಾಕಿಯಾ)ದವರೆಗೆ ಕೊಯ್ದುಕೊಂಡಿದ್ದನು. ತಕ್ಷಣ ರೋಗಿಯನ್ನು ಇ.ಎಮ್.ಟಿ ಮಹೇಶ್ ಭಜಂತ್ರಿ ಅವರು ರೋಗಿಯನ್ನು ಪರೀಕ್ಷಿಸಿದಾಗ ತೀವ್ರ ರಕ್ತಸ್ರಾವದಿಂದ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಳಲುತ್ತಿದ್ದನು.

ರೋಗಿಗೆ ಕುತ್ತಿಗೆಯ ಭಾಗವನ್ನು ಪೂರ್ಣವಾಗಿ ಡ್ರೆಸ್ಸಿಂಗ್ ಮಾಡಿ ರಕ್ತಸ್ರಾವವನ್ನು ಹತೋಟಿಗೆ ತರಲಾಯಿತು. ನಂತರ ಸ್ಥಳೀಯರ ಮತ್ತು ಪೈಲೆಟ್ ಅಶೋಕ್ ರವರ ನೆರವಿನಿಂದ ರೋಗಿಯನ್ನು 1ನೇ ಮಹಡಿಯಿಂದ ಸ್ಪೈನ್ ಬೋರ್ಡ್ ಮುಖಾಂತರ ಅಂಬುಲೆನ್ಸ್ ಒಳಗೆ ಸ್ಥಳಾಂತರಿಸಲಾಯಿತು. ನಂತರ ಮಹೇಶ್ ರವರು ರೋಗಿಗೆ ಐವಿ ಫ್ಲೂಯಿಡ್, ಎನ್.ಎಸ್, ಆಕ್ಸಿಜನ್ ಮತ್ತು ಗಾಯದ ಆರೈಕೆ ಮಾಡುತ್ತಾ ರೋಗಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಾ ಅಂಬುಲೆನ್ಸ್ ನಲ್ಲಿ ಆರೈಕೆ ಮಾಡಿದರು. ಇದರ ಪರಿಣಾಮವಾಗಿ ರೋಗಿಯ ರಕ್ತಸ್ರಾವವು ಕಡಿಮೆಯಾಯಿತು.

ಬಳಿಕ ರೋಗಿಯು ಸ್ವಲ್ಪ ಪ್ರಜ್ಞಾವಸ್ಥೆ ಸ್ಥಿತಿಗೆ ಬಂದನು. ರೋಗಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ವ್ಯಕ್ತಿ ಮಾತನಾಡಲಾಗದ ಸ್ಥಿತಿನಲ್ಲಿರುವುದರಿಂದ ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಕುಟುಂಬದವರು ಹೇಳುವ ಪ್ರಕಾರ ಕೌಟುಂಬಿಕ ಕಲಹ ಎನ್ನಲಾಗುತ್ತಿದೆ.

ಈ ಕುರಿತು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *