Connect with us

Districts

ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ- ರಕ್ತಸಿಕ್ತವಾದ ರಸ್ತೆ

Published

on

ಗದಗ: ಹಳೆ ವೈಷಮ್ಯದ ಹಿನ್ನೆಲೆ ಎರಡು ಕುಟುಂಬಗಳು ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿರುವ ಘಟನೆ ಗದಗದ ಬೆಟಗೇರಿ ಸೆಟಲ್ಮೆಂಟ್‍ನಲ್ಲಿ ನಡೆದಿದೆ.

ನಡು ರಸ್ತೆಯಲ್ಲೆ ಲಾಂಗು, ಮಚ್ಚುಗಳು ಝಳಪಿದ ಹಿನ್ನೆಲೆ ರಸ್ತೆ ಅನೇಕ ಕಡೆಗೆ ರಕ್ತಸಿಕ್ತವಾಗಿದೆ. ಬುಲೆಟ್ ಬೈಕ್, ಕಾರ್, ಮನೆಯ ಕಿಟಕಿ, ಬಾಗಿಲು ಸಂಪೂರ್ಣ ಜಖಂ ಆಗಿವೆ. ಘಟನೆಯಿಂದ ಯೇಸುಕುಮಾರ ಹೊಸಮನಿ (34), ಅನಿಲ ಮುತಗಾರ (35), ಗೋವಿಂದ ಮುತಗಾರ (43) ಮತ್ತು ಶಾಕಮ್ಮ (37)ಗೆ ಗಂಭೀರವಾಗಿ ಗಾಯಗಳಾಗಿವೆ.

ಗಾಯಾಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ ಜಾವಾವ್, ವಿಕಾಸ್ ಜಾದಾವ ಎಂಬವರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಕೆ. ಪ್ರಹ್ಲಾದ್, ಸಿಪಿಐ ಕಿರಣ್ ಕುಮಾರ್ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಗದಗನ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.