Connect with us

Districts

ನಮ್ಮದು ಡಕೋಟಾ ಎಕ್ಸ್‌ಪ್ರೆಸ್‌ ಸರ್ಕಾರವಲ್ಲ: ಬಿ.ಶ್ರೀರಾಮುಲು

Published

on

ಗದಗ: ನಮ್ಮದು ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರವಲ್ಲ, ಜನಪರ ಹಾಗೂ ಅಭಿವೃದ್ಧಿ ಪರ ಸರ್ಕಾರ. ಮುಖ್ಯಮಂತ್ರಿ ಕುರ್ಚಿಗೆ ಹಾರುವ ಕನಸಿನ ಉದ್ದೇಶದಿಂದ ಸಿದ್ದರಾಮಯ್ಯನವರು ಆರೋಪ ಪ್ರತ್ಯಾರೋಪ ಮಾಡ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳುವ ಹಾಗೆ ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರವಲ್ಲ. ಕೊರೊನಾ ಇರೋದರಿಂದ ಅಭಿವೃದ್ಧಿ ಕಾರ್ಯಗಳಾಗಲಿಲ್ಲ. ಈಗ ಪಾರದರ್ಶಕವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳಾಗುತ್ತಿವೆ. ಸಿದ್ದರಾಮ್ಯನವರಿಗೆ ಮುಖ್ಯಮಂತ್ರಿ ಕುರ್ಚಿ ಮಾತ್ರ ಕಾಣುತ್ತಿದೆ. ಆದರೆ ಜನರಿಗೆ ಒಳ್ಳೆಯದಾಗಬೇಕೆಂಬ ಹಿತದೃಷ್ಟಿಯೇ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

ಮುಖ್ಯಮಂತ್ರಿ ಸ್ಥಾನಕ್ಕೆ ಹಾರಬೇಕೆಂದರೆ ಆರೋಪ ಮಾಡಲೇಬೇಕಲ್ವಾ. ಹಾಗಾಗಿ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆದ್ರೆ ಸಾಕು, ನಾನು ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಬಹಳಷ್ಟು ಒಡಕಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಜಿ ಪರಮೇಶ್ವರ್ ನಡುವೆ ಸಿಎಂ ಗಾದಿಗಾಗಿ ಫೈಟ್ ಇದೆ. ಮೊದಲು ಅಲ್ಲಿಯೇ ಸರಿಯಿಲ್ಲ ಎಂದು ನುಡಿದಿದ್ದಾರೆ.

ಈಶ್ವರಪ್ಪ ಎಸ್‍ಟಿ ಹೋರಾಟಕ್ಕೆ ಆರ್‍ಎಸ್.ಎಸ್ ಬೆಂಬಲವಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಮಾಡಿದ್ದಾರೆ. ಆರ್‍ಎಸ್‍ಎಸ್ ಜಾತಿ, ಪಂಗಡ ವಿಷಯಕ್ಕೆ ಕೈಹಾಕಲ್ಲ. ದೇಶದ ಐಕ್ಯತೆಗೆ ಹೋರಾಡುತ್ತೆ. ಸಿದ್ದರಾಮಯ್ಯ ಆಡಳಿತ ಸರ್ಕಾರದಲ್ಲಿ ಕುರುಬ ಸಮಾದಲ್ಲಿ ಸಿದ್ದರಾಮಯ್ಯ ಗುರುತಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

Click to comment

Leave a Reply

Your email address will not be published. Required fields are marked *