ಎಂಟಿಬಿಗೆ ಇದೀಗ ಅವರ ತಪ್ಪು ಗೊತ್ತಾಗಿದೆ: ಪರಮೇಶ್ವರ್

Advertisements

ಮಡಿಕೇರಿ: ಎಂಟಿಬಿ ಅವರಿಗೆ ಅವರು ಮಾಡಿದ ತಪ್ಪು ಇದೀಗ ಗೊತ್ತಾಗಿದೆ. ಈಗ ಅವರಿಗೆ ಪಶ್ಚಾತ್ತಾಪ ಆಗಿದೆ ಎಂದು ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಹೇಳಿದರು.

Advertisements

ಮಡಿಕೇರಿಯ ನಗರ ಸಮೀಪದ ಕರ್ಣಗೇರಿ ಗ್ರಾಮದಲ್ಲಿ ಇರುವ ರಾಜರಾಜೇಶ್ವರಿ ದೇಗುಲಕ್ಕೆ ಪರಮೇಶ್ವರ್ ದಂಪತಿ ಭೇಟಿ ನೀಡಿ ವಾರ್ಷಿಕ ಜಾತ್ರೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ  ಬಿಜೆಪಿಗೆ ಸೇರಿ ತಪ್ಪು ಮಾಡಿದೆವು ಎಂದು ಸಚಿವ ಎಂಟಿಬಿ ನಾಗರಾಜ್ ಬಹಿರಂಗ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಅನೇಕ ಬಾರಿ ಅವರ ಮನೆಗೆ ಹೋಗಿ ಮನವೊಲಿಸಲು ಪ್ರಯತ್ನಿಸಿದ್ದೆವು. ಎಂಟಿಬಿ ಅವರ ಮನೆಗೆ ಡಿಕೆಶಿ ಮತ್ತು ನಾನು ಹೋಗಿದ್ದೆವು. ಆದರೆ ಅಂದು ಮಾತು ಕೇಳಲಿಲ್ಲ. ಅವರು ಏನೇನೋ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗಿರುತ್ತಾರೆ. ಆದರೆ ಪಾಪ ನಿರೀಕ್ಷೆಗಳು ಸುಳ್ಳಾಗಿರುತ್ತವೆ ಎಂದು ವ್ಯಂಗ್ಯವಾಡಿದರು.

Advertisements

ಇದೀಗ ಎಂಟಿಬಿಗೆ ಪಶ್ಚಾತ್ತಾಪವೂ ಆಗಿರುತ್ತದೆ. ಹೀಗಾಗಿ ಆ ರೀತಿ ಬಹಿರಂಗವಾಗಿ ಮಾತನಾಡಿರುತ್ತಾರೆ. ಅವರು ಪಕ್ಷಕ್ಕೆ ಬರುವುದಾದರೆ ಸೇರಿಸಿಕೊಳ್ಳುವ ವಿಚಾರ ಅದನ್ನು ಹೈಕಮಾಂಡ್ ಚರ್ಚಿಸಿ ನಿರ್ಧಾರ ಮಾಡುತ್ತದೆ. ಆದರೆ ಈಗಾಗಲೇ ಸಿದ್ದರಾಮಯ್ಯ ಸೇರಿಸಿಕೊಳ್ಳಲ್ಲ ಎಂದಿದ್ದಾರೆ. ಆದರೆ ಸೇರಿಸಿಕೊಳ್ಳಬೇಕೆ ಬೇಡವೇ ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮಿತ್ ಶಾ ಮಿಂಚಿನ ಸಂಚಾರ- ವಿದ್ಯಾರ್ಥಿಗಳಿಗೆ ಜೋಷ್ ತುಂಬಿದ ಕೇಂದ್ರ ಸಚಿವ

Advertisements

ಧರ್ಮ ಸಂಘರ್ಷದಿಂದ ಯಾರಿಗೂ ಉಪಯೋಗ ಇಲ್ಲ. ವಸುದೈವ ಕುಟುಂಬಕಂ ಅಂತೆ ಎಲ್ಲರೂ ಬದುಕಬೇಕು. ನಾಡಿನ ಸುಭಿಕ್ಷೆ ಮತ್ತು ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೂ ಸದ್ಯದ ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಬಿಜೆಪಿಗೆ ಬಿಟ್ಟದ್ದು. ಆದರೆ ಈಗ ಬದಲಾವಣೆ ಮಾಡುವುದು ಸೂಕ್ತವಲ್ಲ. ಜೊತೆಗೆ ಸಂಪುಟ ವಿಸ್ತರಣೆಗೆ ಮಾಡಬಾರದು. ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟರು. ಇದನ್ನೂ ಓದಿ:ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

ಪಿಎಸ್‌ಐ ನೇಮಕಾತಿ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದು ರಾಜಕೀಯ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಹಗರಣದಲ್ಲಿ ಸಚಿವರು, ಸಂಬಂಧಿಕರ ಹೆಸರು ತಳುಕು ವಿಚಾರ ತನಿಖೆ ಪೂರ್ಣಗೊಂಡಾಗ ಎಲ್ಲವೂ ಗೊತ್ತಾಗಲಿದೆ‌. ಪಿಎಸ್ಐ ನೇಮಕಾತಿ ಬಗ್ಗೆ ಇದೀಗಾ ಹಗರಣ ಸಂಬಂಧ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡಾಗ ಎಲ್ಲವೂ ಗೊತ್ತಾಗಲಿದೆ. ಸಚಿವರು ಭಾಗಿಯಾಗಿದ್ದಾರಾ?, ಶಾಸಕರು ಭಾಗಿಯಾಗಿದ್ದಾರಾ? ಎನ್ನೋದು ಗೊತ್ತಾಗುತ್ತದೆ. ಈಗ ನಾವು ಊಹೆ ಮಾಡಬಹುದುಷ್ಟೇ ಎಂದು ಹೇಳಿದರು.

ಈಗಾಗಲೇ ಉಗ್ರಪ್ಪ ಮತ್ತು ಡಿಕೆಶಿ ತಂಡ ಮಾಹಿತಿ ಕಲೆಹಾಕುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಡಳಿತ ಪಕ್ಷ ತಪ್ಪು ಮಾಡಿದಾಗ ವಿರೋಧ ಪಕ್ಷ ಎಚ್ಚರಿಸುವ ಕೆಲಸ ಮಾಡುತ್ತದೆ. ಹಾಗಾಗಿ ಮಾಹಿತಿ ಕಲೆಹಾಕಿ ತನಿಖಾ ತಂಡಕ್ಕೆ ನೀಡಿದರೆ ಅನುಕೂಲವಾಗಲಿದೆ. ತನಿಖೆ ತೀವ್ರಗೊಳಿಸಲು ತಂಡಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದರಲ್ಲಿ ತಪ್ಪೇನಿದೆ ಎಂದರು.

Advertisements
Exit mobile version