ತುಮಕೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಕಾರಣಕ್ಕೆ ಆಟವಾಡಲು ಬಂದಿದ್ದಾರೆಯೇ? ಗುಜರಾತಿನಲ್ಲಿ ಮಾತ್ರ ನಿಮ್ಮ ಆಟ ನಡೆಯಬಹುದು. ಆದರೆ ಇಡೀ ಭಾರತದಲ್ಲಿ ಸಾಧ್ಯವಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ ಭೂಮಿ ಮತ್ತು ವಸತಿಗಾಗಿ ಆಗ್ರಹಿಸಿ ಆರಂಭವಾದ ಅಹೋರಾತ್ರಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ದೊರೆಸ್ವಾಮಿ, ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಚದುರಂಗದ ಆಟ ಆಡುತ್ತಿದ್ದರು. ಇಂದು ಮೋದಿ ಮತ್ತು ಶಾ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನೀವು ಆಟವಾಡಲು ರಾಜಕಾರಣಕ್ಕೆ ಬಂದಿದ್ದೀವಿ ಎಂದುಕೊಂಡರೆ ಮನೆಗೆ ಹೋಗಿ ಎಂದು ಮೋದಿ, ಶಾ ವಿರುದ್ಧ ಗುಡುಗಿದ್ದಾರೆ.
Advertisement
Advertisement
ಮೋದಿ, ಶಾ ಅವರ ಚದುರಂಗದಾಟ ವಾಸ್ತವದಲ್ಲಿ ಸಾಧ್ಯವಿಲ್ಲ. ಈಗ ಕಾಲ ಬದಲಾಗಿದೆ. ಗುಜರಾತಿನಲ್ಲಿ ನೀವು ಆಟ ಆಡಬಹುದು. ಆದರೆ ಭಾರತದಾದ್ಯಂತ ಅದನ್ನು ಮಾಡಲು ಸಾಧ್ಯವಿಲ್ಲ. ಈಗಾಗಲೇ ಮಹಾರಾಷ್ಟ್ರದಲ್ಲಿ ನಿಮ್ಮ ಮರ್ಯಾದೆ ಹೋಗಿದೆ. ನಿಮ್ಮ ಆಟಗಳಿಗೆ ಬಗ್ಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.