Saturday, 23rd March 2019

Recent News

ರಸ್ತೆಗಿಳಿದ ಕಾಡಿನ ರಾಜರು..!- ವಿಡಿಯೋ ನೋಡಿ

ಕೇಪ್‍ಟೌನ್: 4 ಸಿಂಹಗಳು ರಾಜಗಾಂಭೀರ್ಯದಿಂದ ರಸ್ತೆಯಲ್ಲಿ ನಡೆದಾಡುತ್ತಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರನ್ನು ಬೆರಗಾಗಿಸುತ್ತಿದೆ.

ದಕ್ಷಿಣ ಆಫ್ರೀಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದ ರೋಡ್‍ನಲ್ಲಿ ಈ ರೋಚಕ ದೃಶ್ಯ ಕಂಡುಬಂದಿದೆ. ರಸ್ತೆಯಲ್ಲಿ 4 ಸಿಂಹಗಳು ಯಾರ ಭಯವಿಲ್ಲದೆ ವಾಹನಗಳ ಮಧ್ಯೆ ರಾಜಾರೋಷವಾಗಿ ನಡೆದಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಈ ವಿಡಿಯೋವನ್ನು `ಲಯನ್ಸ್ ಆಫ್ ಕ್ರುಗರ್ ನ್ಯಾಷನಲ್ ಪರ್ಕ್’ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಕಳೆದ 2 ವಾರದ ಹಿಂದೆ ಅಷ್ಟೆ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೆ ಸರಿ ಸುಮಾರು 2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಲ್ಲದೆ ಸಾವಿರಾರು ಜನರು ಕಮೆಂಟ್ ಮಾಡಿದ್ದು, 38 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

ಕೇವಲ 33 ಸೆಕೆಂಡ್ ಇರುವ ಈ ರೋಚಕ ವಿಡಿಯೋ ನೋಡಿದ ಜನರು ಅಬ್ಬಾ ಎಂತಹ ಸಿಂಹ ನಡಿಗೆ ಅಂತ ಆಶ್ಚರ್ಯಗೊಂಡಿದ್ದಾರೆ. ಕಾಡನ್ನು ನಾಶ ಮಾಡಿ ರಸ್ತೆಗಳನ್ನು ನಿರ್ಮಿಸಿ, ಅದರ ಮೇಲೆ ತಮ್ಮದೆ ರಾಜ್ಯಭಾರ ಮಾಡುವ ವಾಹನಗಳೆಗೆ ಸಿಂಹಗಳು ತಮ್ಮ ಗತ್ತನ್ನು ತೋರಿಸಿವೆ. ಕಾಡಿನ ರಾಜ ಅಂದ್ರೆ ಯಾರಿಗೂ ಜಗ್ಗಲ್ಲ, ಯಾರಿಗೂ ಹೆದರಲ್ಲ ಅನ್ನೋ ರೀತಿ ಈ 4 ಸಿಂಹಗಳು ರಸ್ತೆಯಲ್ಲಿ ಆರಾಮಾಗಿ ಓಡಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *