Connect with us

ಭಾರತ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕೋವಿಡ್‍ಗೆ ಬಲಿ

ಭಾರತ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕೋವಿಡ್‍ಗೆ ಬಲಿ

ಉಡುಪಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಮಹೇಶ್ ಶೇಖರ ಪದ್ದು ಬಂಗೇರ ಕೋವಿಡ್‍ಗೆ ಬಲಿಯಾಗಿದ್ದಾರೆ.

ಎಂಬತ್ತರ ದಶಕದಲ್ಲಿ ದೇಶದ ಫುಟ್ಬಾಲ್ ತಂಡವನ್ನು ಮುನ್ನಡೆಸಿದ್ದ ಉಡುಪಿ ಮೂಲದ ಶೇಖರ್ ಪದ್ದು ಬಂಗೇರ ಅವರಿಗೆ 74 ವರ್ಷ ವಯಸ್ಸಾಗಿತ್ತು. ಚಿಕ್ಕಂದಿನಲ್ಲೇ ಉಡುಪಿಯಿಂದ ಮುಂಬೈಗೆ ತೆರಳಿ ಅವರು ಜೀವನ ರೂಪಿಸಿಕೊಂಡಿದ್ದರು. ಭಾರತ ತಂಡದ ಗೋಲ್ ಕೀಪರ್ ಹಾಗೂ ಕ್ಯಾಪ್ಟನ್ ಕೂಡ ಆಗಿದ್ದ ಶೇಖರ್, ಮೂಲತಃ ಉಡುಪಿಯ ಬಡಾನಿಡಿಯೂರಿನವರು. ಶೇಖರ್ ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದರು. ಹಲವು ಪ್ರತಿಷ್ಠಿತ ಕ್ಲಬ್-ಸಂಸ್ಥೆಗಳಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದ್ದು, ಈಗಲೂ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಸಿನಿಮಾ ಮಾತ್ರವಲ್ಲ, ಫುಟ್ಬಾಲ್ ಫೀಲ್ಡ್‌ನಲ್ಲೂ ಸನ್ನಿ ಕಮಾಲ್

ಮುಂಬೈನಲ್ಲಿ ಇದ್ದಾಗಲೇ ಶೇಖರ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೆಲ ತಿಂಗಳ ಹಿಂದೆ ಮುಂಬೈನಿಂದ ಉಡುಪಿಗೆ ಆಗಮಿಸಿದ್ದರು. ಬಳಿಕ ಇಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಶೇಖರ್ ಮೃತಪಟ್ಟಿದ್ದಾರೆ. ಉಡುಪಿಯ ನಗರದ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ವಿಧಿವತ್ತಾಗಿ ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಯಿತು.

Advertisement
Advertisement