Wednesday, 11th December 2019

ಸಿದ್ದರಾಮಯ್ಯ ಪರಿಪೂರ್ಣ ನಟ- ಶೋಭಾ ಕರಂದ್ಲಾಜೆ

ಬೆಂಗಳೂರು: ಸಿಎಂ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಸಭೆಯ ಮೇಲೆ ಸಭೆ ಮಾಡುತ್ತಿದ್ದಾರೆ. ಇತ್ತ ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೀವೊಬ್ಬ ಪರಿಪೂರ್ಣ ನಟ ಎಂದು ಟ್ವೀಟ್ ಮಾಡುವ ಮೂಲಕ ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಅವರು, “ಮೈತ್ರಿ ಸರ್ಕಾರ, ಮುಖ್ಯಮಂತ್ರಿ ಇಲ್ಲವೇ ದೇವೇಗೌಡರ ವಿರುದ್ಧ ಯಾರೂ ಮಾತನಾಡಬಾರದೆಂದು ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತಿದ್ದೇನೆ. ಮೈತ್ರಿ ಭಂಗಕ್ಕಾಗಿ ವಿರೋಧಿಗಳು ಹುಟ್ಟುಹಾಕುತ್ತಿರುವ ಜಗಳದ ಗಾಳಿ ಸುದ್ದಿಗಳ ಬಗ್ಗೆ ಎಚ್ಚರಕೆಯಿಂದಿರಿ” ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಟ್ವೀಟ್‍ಗೆ, “ರಾಜ್ಯ ಸರಕಾರದ ಪತನಕ್ಕೆ ಬಾಹ್ಯ ಪ್ರಚೋದನೆಯನ್ನು ನೀಡುತ್ತಾ, ಅದೇ ಸಮಯದಲ್ಲಿ ವಿರೋಧ ಪಕ್ಷವನ್ನು ದೂಷಣೆ ಮಾಡುವ ಪ್ರಹಸನವನ್ನು ತುಂಬಾ ಯಶಸ್ವಿಯಾಗಿ ಮಾಡುತ್ತಿದ್ದೀರಿ ಸಿದ್ದರಾಮಯ್ಯನವರೇ.. ನೀವೊಬ್ಬ ಪರಿಪೂರ್ಣ ನಟ” ಎಂದು ಶೋಭಾ ಕರಂದ್ಲಾಜೆ ಅವರು ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *