Connect with us

Crime

ವಿದೇಶದಿಂದ ಬಂದವನನ್ನ ಕೊಚ್ಚಿ ಕೊಚ್ಚಿ ಕೊಂದ್ರು

Published

on

ಶಿವಮೊಗ್ಗ: ವಿದೇಶದಿಂದ ಬಂದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

ಜಿಲ್ಲೆಯ ಸಾಗರದ ಮಂಕಳಲೆ ಸಮೀಪದ ಹಾನಂಬಿ ಹೊಳೆ ಬಳಿ ಘಟನೆ ನಡೆದಿದ್ದು, ಸಾಗರದ ನೆಹರು ಬಡಾವಣೆ ನಿವಾಸಿ 23 ವರ್ಷದ ಮಹಮದ್ ಶಾಜಿಲ್ ಕೊಲೆಯಾದ ಯುವಕ. ವಿದೇಶದಲ್ಲಿದ್ದ ಶಾಜಿಲ್ ರಜೆಯ ಹಿನ್ನೆಲೆ ಸಾಗರಕ್ಕೆ ಆಗಮಿಸಿದ್ದನು. ಇಂದು ಸಾಗರದ ಮಂಕಳಲೆ ಬಳಿ ಮೂವರ ಯುವಕರ ಗ್ಯಾಂಗ್ ಶಾಜಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಕೂಡಲೇ ಶಾಜಿಲ್ ನನ್ನು ಸಾಗರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಹಳೆ ವೈಷಮ್ಯ ಹಿನ್ನೆಲೆ ಕೊಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ನಾಲ್ವರು ಯುವಕರ ಗುಂಪು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಪ್ರಾರಂಭಿಸಿದ್ದಾರೆ. ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.