Connect with us

Bollywood

ಸಚಿವರ ಭೋಜನಕೂಟ ತಿರಸ್ಕರಿಸಿದ ವಿದ್ಯಾ- ಮರುದಿನ ಅಧಿಕಾರಿಗಳಿಂದ ಶೂಟಿಂಗ್ ಸ್ಥಗಿತ

Published

on

ಮುಂಬೈ/ಭೋಪಾಲ್: ಅರಣ್ಯ ಸಚಿವರ ಔತನಕೂಟ ತಿರಸ್ಕರಿಸಿದ್ದಕ್ಕೆ ವಿದ್ಯಾ ಬಾಲನ್ ಸಿನಿಮಾದ ಚಿತ್ರೀಕರಣ ತಡೆಯಲಾಗಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸುತ್ತಿವೆ.

ಮಧ್ಯಪ್ರದೇಶದ ಅರಣ್ಯ ಸಚಿವ ವಿಜಯ್ ಶಾ ತಮ್ಮ ರಾಜ್ಯದಲ್ಲಿ ಶೂಟಿಂಗ್ ನಡೆಸುತ್ತಿರುವ ನಟಿ ವಿದ್ಯಾ ಬಾಲನ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಆದ್ರೆ ವಿದ್ಯಾ ಬಾಲನ್ ತಮ್ಮ ಶೆಡ್ಯೂಲ್ ಮೊದಲ ನಿಗದಿಯಾಗಿದ್ದರಿಂದ ಭೋಜನಕೂಟಕ್ಕೆ ತೆರಳಿರಲಿಲ್ಲ. ಇದರಿಂದ ಸಚಿವರು ಮರುದಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ತಡೆ ನೀಡಿದ್ದರು ಎನ್ನಲಾಗಿದೆ. ಕೊನೆಗೆ ಚಿತ್ರತಂಡ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ ಬಳಿಕ ಶೂಟಿಂಗ್ ನಡೆಸಲು ಅನುಮತಿ ನೀಡಲಾಗಿದೆ ಎಂದು ವರದಿ ಆಗಿದೆ.

ವಿದ್ಯಾ ಬಾಲನ್ ನಟಿಸುತ್ತಿರುವ ‘ಶೇರರ್ನಿ’ ಚಿತ್ರೀಕರಣ ಬಾಲಾಘಾಟ್ ನಲ್ಲಿ ನಡೆಯುತ್ತಿದ್ದು, ಚಿತ್ರತಂಡ ಅಕ್ಟೋಬರ್ 20 ರಿಂದ ನವೆಂಬರ್ 21ರ ವರೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಂಡಿತ್ತು. ಶೂಟಿಂಗ್ ಹಿನ್ನೆಲೆ ವಿದ್ಯಾ ಬಾಲನ್ ಮಹಾರಾಷ್ಟ್ರದ ಗೋಂದಿಯಾದಲ್ಲಿ ಉಳಿದುಕೊಂಡಿದ್ದರು. ಸಂಜೆ 5 ಗಂಟೆಗೆ ಸಚಿವ ವಿಜಯ್ ಶಾ ನಟಿಯನ್ನ ಔತಣಕೂಟಕ್ಕೆ ಆಹ್ವಾನಿಸಿದ್ದರು. ಆದ್ರೆ ವಿದ್ಯಾ ಬಾಲನ್ ಊಟಕ್ಕೆ ತೆರಳಿರಲಿಲ್ಲ. ಮರುದಿನ ಶೂಟಿಂಗ್ ಸ್ಥಳಕ್ಕೆ ಆಗಮಿಸಿ ಜಿಲ್ಲಾ ರಣ್ಯಾಧಿಕಾರಿಗಳು ಶೂಟಿಂಗ್ ವಾಹನಗಳನ್ನು ಅರಣ್ಯ ಪ್ರವೇಶಿಸುವದನ್ನ ತಡೆದಿದ್ದರು. ಕೆಲ ಸಮಯದ ಬಳಿಕ ಚಿತ್ರೀಕರಣಕ್ಕೆ ಅನಮತಿ ನೀಡಲಾಗಿತ್ತು.

ವಿಜಯ್ ಶಾ ಸ್ಪಷ್ಟನೆ: ಔತಣಕೂಟವನ್ನ ಜಿಲ್ಲಾಡಳಿತ ಆಯೋಜಿಸಿತ್ತು. ಅಧಿಕಾರಿಗಳು ಶೂಟಿಂಗ್ ವಾಹನಗಳನ್ನ ತಡೆದಿರೋದು ನಿಜ. ಪ್ರತಿದಿನ ಚಿತ್ರತಂಡ ಅರಣ್ಯದೊಳಗೆ ಎರಡು ಜನರೇಟರ್ ವಾಹನಗಳನ್ನು ತೆಗೆದುಕೊಂಡು ಹೋಗುತ್ತಿತ್ತು. ಆದ್ರೆ ಅಂದು ಎರಡಕ್ಕಿಂತ ಹೆಚ್ಚು ಜನರೇಟರ್ ವಾಹನ ಅರಣ್ಯದೊಳಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಸಚಿವ ವಿಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in