ಬಳ್ಳಾರಿ: ಅಪರೂಪದ ಹೆಬ್ಬಾವು ಸಾಯಿಸಿದ ಆರೋಪದ ಮೇಲೆ ರೈತರೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ದೇಶನೂರು ಗ್ರಾಮದಲ್ಲಿ ನಡೆದಿದೆ.
ದೇಶನೂರು ಗ್ರಾಮದ ನಿವಾಸಿ ದುರ್ಗಪ್ಪಾ ಬಂಧಿತ ರೈತ. ದುರ್ಗಪ್ಪಾ ಅವರ ಜಮೀನಿನಲ್ಲಿ ಭತ್ತ ಕಟಾವು ಮಾಡುವ ಸಂದರ್ಭದಲ್ಲಿ ಕಟಾವು ಯಂತ್ರಕ್ಕೆ ಸಿಲುಕಿ ಹೆಬ್ಬಾವುವೊಂದು ಸಾವನ್ನಪ್ಪಿತ್ತು. ಆದರೆ ಉದ್ದೇಶ ಪೂರ್ವಕವಾಗಿಯೇ ಇಂಡಿಯನ್ ರಾಕ್ ಪೈಥಾನ್ ಅಪರೂಪದ ಜಾತಿಯ ಹಾವನ್ನು ಕೊಂದಿದ್ದೀರಾ ಎಂದು ದುರ್ಗಪ್ಪಾ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
Advertisement
Advertisement
ಈ ಕಾರಣಕ್ಕೆ ಗ್ರಾಮದ ಇತರೆ ರೈತರು ಕೂಡಲೇ ದುರ್ಗಪ್ಪಾ ಅವರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳುವಂತೆ ಒತ್ತಾಯಿಸಿದ್ದಾರೆ.