Connect with us

Latest

ಮೋದಿಯಂತಿದ್ದ ವ್ಯಕ್ತಿ ಫೋಟೋ ಬಳಸಿ ಪೋಸ್ಟ್- ಕಾಮಿಡಿ ಗ್ರೂಪ್ ಎಐಬಿ ವಿರುದ್ಧ ಎಫ್‍ಐಆರ್

Published

on

ಮುಂಬೈ: ಪ್ರಧಾನಿ ಮೋದಿ ಬಗ್ಗೆ ಟ್ವಿಟ್ಟರ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಾಮಿಡಿ ಗ್ರೂಪ್ ಎಐಬಿ ವಿರುದ್ಧ ಮುಂಬೈ ಪೊಲೀಸರು ಮಾನನಷ್ಟ ಮೊಕದ್ದಮೆ ಹಾಗೂ ಐಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.

ಗುರುವಾರದಂದು ಕಾಮಿಡಿ ಗ್ರೂಪ್ ಎಐಬಿ, ರೈಲ್ವೆ ನಿಲ್ದಾಣದಲ್ಲಿ ತೆಗೆಯಲಾದ ಮೋದಿಯಂತೆ ಕಾಣುವ ವ್ಯಕ್ತಿಯೊಬ್ಬರ ಫೋಟೋ ಜೊತೆಗೆ ಸ್ನ್ಯಾಪ್‍ಚಾಟ್‍ನ ನಾಯಿಯ ಫಿಲ್ಟರ್ ಹಾಕಿ ಎಡಿಟ್ ಮಾಡಿದ ಮೋದಿ ಫೋಟೋವನ್ನ ಹಾಕಿ ವಾಂಡರ್‍ಲಸ್ಟ್ ಎಂದು ಶೀರ್ಷಿಕೆ ಕೊಟ್ಟು ಪೋಸ್ಟ್ ಹಾಕಿದ್ದರು. ಮೋದಿ ಅವರ ವಿದೇಶ ಪ್ರವಾಸವನ್ನು ಅಣಕಿಸುವಂತಿದ್ದ ಈ ಪೋಸ್ಟ್‍ಗೆ ಟ್ವಿಟ್ಟರ್‍ನಲ್ಲಿ ಭಾರೀ ಖಂಡನೆ ವ್ಯಕ್ತವಾಗಿತ್ತು. ಮೋದಿ ಅವರಿಗೆ ಹಾಗೂ ರಾಷ್ಟ್ರೀಯ ಭಾವನೆಗೆ ಇದರಿಂದ ಧಕ್ಕೆಯಾಗಿದೆ ಎಂದು ಟ್ವಿಟ್ಟರಿಗರು ಆಕ್ರೋಶಗೊಂಡಿದ್ರು.

ತೀವ್ರ ಟೀಕೆಯ ನಂತರ ಗ್ರೂಪ್ ಈ ಪೋಸ್ಟನ್ನು ಡಿಲೀಟ್ ಮಾಡಿತ್ತು. ಆದ್ರೆ ವ್ಯಕ್ತಿಯೊಬ್ಬರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ಪ್ರಕರಣವನ್ನು ಸೈಬರ್ ಪೊಲೀಸ್ ಠಾಣೆಗೆ ವರ್ಗಾಯಿಸುತ್ತೇವೆ ಎಂದು ಟ್ವೀಟ್‍ನಲ್ಲಿ ಹೇಳಿದ್ದರು.

ಕಾಮಿಡಿ ಎಐಬಿ ಗ್ರೂಪ್‍ನ ಪ್ರಮುಖರಲ್ಲೊಬ್ಬರಾದ ತನ್ಮಯ್ ಭಟ್ ಇದಕ್ಕೆ ಪ್ರತಿಕ್ರಿಯಿಸಿ, ಇದೇ ರೀತಿ ತಮಾಷೆ ಮಾಡುತ್ತಲೇ ಇರ್ತೀವಿ. ಅಗತ್ಯ ಬಿದ್ದರೆ ಡಿಲೀಟ್ ಮಾಡ್ತೀವಿ. ಮತ್ತೆ ತಮಾಷೆ ಮಾಡ್ತೀವಿ. ಅಗತ್ಯ ಬಿದ್ದರೆ ಕ್ಷಮೆ ಕೇಳ್ತೀವಿ. ನೀವು ಏನು ಯೋಜನೆ ಮಾಡ್ತೀರೋ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಸರಣಿ ಟ್ವೀಟ್ ಮಾಡಿದ್ದರು. ಕೆಲವು ಟ್ವಿಟ್ಟರಿಗರು ತನ್ಮಯ್ ಪರವಾಗಿ ಟ್ವೀಟ್ ಮಾಡಿದ್ದರು.

https://twitter.com/rd_rules_21/status/885389682883915776?ref_src=twsrc%5Etfw&ref_url=http%3A%2F%2Fwww.ndtv.com%2Findia-news%2Ffor-pm-modi-meme-comedy-group-aib-charged-by-mumbai-police-1724696

ಈ ಹಿಂದೆ ತನ್ಮಯ್ ಭಟ್, ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹಾಗೂ ಗಾಯಕಿ ಲತಾ ಮಂಗೇಶ್ಕರ್ ನಡುವಿನ ಅಣಕು ಸಂಭಾಷಣೆಯ ವ್ಯಂಗ್ಯ ವಿಡಿಯೋ ಮಾಡಿದ್ದು ಕೂಡ ತೀವ್ರ ಖಂಡನೆಗೆ ಗುರಿಯಾಗಿತ್ತು.