Connect with us

Crime

ಯೂಟರ್ನ್ ತೆಗೆದುಕೊಳ್ಳುವ ವೇಳೆ ಅಪಘಾತ- ಅಣ್ಣ, ತಂಗಿ ದುರ್ಮರಣ

Published

on

ತಲ್ಲಹಸ್ಸಿ(ಫ್ಲೋರಿಡಾ): ಅಣ್ಣ-ತಂಗಿ ಇಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಫ್ಲೋರಿಡಾ ಹೆದ್ದಾರಿಯಲ್ಲಿ ನಡೆದಿದೆ.

ಮೃತರನ್ನು ಡೊಮಿನಿಕ್ ಮಿಲಿಸ್ (21) ಮತ್ತು ಡ್ಯಾನಿಕಾ ಮಿಲಿಸ್(18) ಎಂದು ಗುರುತಿಸಲಾಗಿದೆ. ಇವರು ವಿಸ್ ಓಮ್ರೊದ ನಿವಾಸಿಗಳಾಗಿದ್ದಾರೆ.

ಅಣ್ಣ- ತಂಗಿ ಇಬ್ಬರು ಇಂಟನ್ರ್ಯಾಷನಲ್ ಸ್ಪೀಡ್‍ವೇನಲ್ಲಿ ಕ್ರಿಸ್‍ಮಸ್ ದೀಪಗಳನ್ನು ನೋಡಿ ಮನೆಗೆ ಬರುತ್ತಿದ್ದರು. ಸಂಜೆ 7 ಗಂಟೆ ಸುಮಾರಿಗೆ ಡೇಟೋನಾ ಬೀಚ್ ಬಳಿ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬನು ಯು-ಟರ್ನ್ ತೆಗೆದುಕೊಳ್ಳಲು ಹೋಗಿದ್ದಾನೆ. ಈ ವೇಳೆ ಅಣ್ಣ- ತಂಗಿ ಇರುವ ವಾಹನಕ್ಕೆ ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಡೊಮಿನಿಕ್ ಮಿಲಿಸ್ ಕಾರಿನ ಚಕ್ರದಡಿಯಲ್ಲಿ ಸಿಕ್ಕಿ ಕೊಂಡು ಪ್ರಾಣ ಬಿಟ್ಟಿದ್ದಾನೆ. ತಂಗಿ ಡ್ಯಾನಿಕಾ ಮಿಲಿಸ್‍ಗೆ ರಕ್ತ ಸಾವ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಅಪಘಾತದಲ್ಲಿ ಅಣ್ಣ-ತಂಗಿ ಜೊತೆಗೆ ಇದ್ದ ಇಬ್ಬರು ಸೋದರಸಂಬಂಧಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಇವರನ್ನು ಆಸ್ಪತ್ರೆಗೆ ದಾಖಲಾಗಿದೆ.

ಈ ಅಪಘಾತದಲ್ಲಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿರುವ ವ್ಯಕ್ತಿ ರದ್ದುಪಡಿಸಿದ ಪರವಾನಗಿಯೊಂದಿಗೆ ಚಾಲನೆ ಮಾಡುತ್ತಿದ್ದ. ಈತ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in