Connect with us

Crime

ಸಮುದ್ರದಲ್ಲಿ ತೇಲಿ ಬಂದ ಬಾಟಲ್- ಮದ್ಯವೆಂದು ಕುಡಿದು ಮೀನುಗಾರರು ಸಾವು

Published

on

ಚೆನ್ನೈ: ಸಮುದ್ರದಲ್ಲಿ ತೇಲಿಬಂದ ಬಾಟಲ್‍ನಲ್ಲಿರುವುದು ವಿದೇಶಿ ಮದ್ಯ ಎಂದು ಕುಡಿದು ಮೂವರು ಮೀನುಗಾರರು ಪ್ರಾಣಬಿಟ್ಟಿರುವ ಘಟನೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದಿದೆ.

ಮೃತರನ್ನು ರಾಮೇಶ್ವರಂ ಬಳಿಯ ತಂಗಾಚಿಮಡಂನ ಆಂತೋನಿಸಾಮಿ (38) ಅರೋಕಿಯಾ ಪ್ರೊಹಿತ್ (50) ಹಾಗೂ ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಈ ಮೂವರು ಸಮುದ್ರದಲ್ಲಿ ತೇಲಿ ಬರುತ್ತಿರುವ ಬಾಟಲ್ ನೋಡಿ ವಿದೇಶಿ ಮದ್ಯ ಎಂದು ಕುಡಿದು ಪ್ರಾಣ ಬಿಟ್ಟಿದ್ದಾರೆ.

ಈ ಮೂವರು ಮೀನು ಹಿಡಿಯಲು ಬೋಟ್‍ನಲ್ಲಿ ಸಮುದ್ರಕ್ಕೆ ಹೋಗಿದ್ದಾರೆ. ಈ ವೇಳೆ ಸಮುದ್ರದಲ್ಲಿ ತೇಲುತ್ತಿರುವ ಬಾಟಲ್ ನೋಡಿ ಮದ್ಯ ಎಂದು ಆಸೆಯಿಂದ ಕುಡಿದಿದ್ದಾರೆ. ಈ ವೇಳೆ ಮೂವರು ಅಸ್ವಸ್ಥಗೊಂಡಿದ್ದಾರೆ. ಆಂತೋನಿಸಾಮಿ ತೀರಕ್ಕೆ ಹೋಗುವಾಗ ದಾರಿಯಲ್ಲಿ ಮೃತಪಟ್ಟಿದ್ದಾನೆ. ಅರೋಕಿಯಾ ಪ್ರೊಹಿತ್ ಹಾಗೂ ವಿನೋದ್ ಕುಮಾರ್ ನಾಗಪಟ್ಟಿಣಂ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆಪ್ರಾಣಬಿಟ್ಟಿದ್ದಾರೆ.

ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಕರಾವಳಿ ಭದ್ರತಾ ಪಡೆ ಪೊಲೀಸರು ಮತ್ತು ಇತರ ಅಧಿಕಾರಿಗಳು ಈ ಪ್ರಕರಣ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *