Sunday, 15th September 2019

ನಾಯಕನಾಗಿ ವಿರಾಟ್ ಕೊಹ್ಲಿ ಬಾಲಿವುಡ್‍ಗೆ ಪ್ರವೇಶ- ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಅಭಿಮಾನಿಗಳು ವಿರಾಟ್ ಬಾಲಿವುಡ್‍ಗೆ ಪ್ರವೇಶಿಸಿದ್ದಾರಾ ಎಂದು ಯೋಚಿಸುತ್ತಿದ್ದಾರೆ.

ವಿರಾಟ್ ಇಂದು ಬೆಳಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಆ ಪೋಸ್ಟರ್ ಗೆ ‘ಟ್ರೈಲರ್- ದಿ ಮೂವಿ’ ಎಂದು ಹೆಸರಿಡಲಾಗಿದೆ. ಸದ್ಯ ವಿರಾಟ್ ಈ ಪೋಸ್ಟರ್ ಶೇರ್ ಮಾಡಿ ಅದಕ್ಕೆ, “10 ವರ್ಷಗಳ ನಂತರ ಮತ್ತೊಂದು ಡೆಬ್ಯೂ” ಎಂದು ಕ್ಯಾಪ್ಷನ್ ನೀಡಿದ್ದಾರೆ.

ವಿರಾಟ್ ಅವರ ಟ್ರೈಲರ್-ದಿ ಮೂವಿ ಪೋಸ್ಟರ್ ಮೇಲೆ ಇನ್ಟ್ರಡ್ಯೂಸಿಂಗ್ ವಿರಾಟ್ ಕೊಹ್ಲಿ ಎಂದು ಬರೆಯಲಾಗಿದೆ. ಅಲ್ಲದೇ ಈ ಪ್ರೊಡಕ್ಷನ್ ಅನ್ನು ವಿರಾಟ್ ಅವರ ವ್ರಾಂಗ್ ಸಂಸ್ಥೆ ಪ್ರೊಡಕ್ಷನ್ ಮಾಡಲಿದೆ. ಈ ಪೋಸ್ಟರ್ ಕೆಳಭಾಗದಲ್ಲಿ ಸೆಪ್ಟೆಂಬರ್ 28, 2018 ಬಿಡುಗಡೆ ಎಂದು ಕೂಡ ಬರೆಯಲಾಗಿದೆ.

ಈ ಪೋಸ್ಟರ್ ನಲ್ಲಿ ವಿರಾಟ್ ಇಂಟೇನ್ಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಅವರ ಕಾಲು ಗಾಳಿಯಲ್ಲಿ ತೇಲಾಡುತ್ತಿದೆ. ಪೋಸ್ಟರ್ ನಲ್ಲಿ ವಿರಾಟ್ ಹಿಂದೆ ಸ್ಫೋಟಗೊಂಡ ಬೆಂಕಿಯ ಬ್ಯಾಕ್‍ಗ್ರೌಂಡ್ ಇದೆ. ಈ ಪೋಸ್ಟರ್ ನೋಡಿದರೆ, ವಿರಾಟ್ ಆ್ಯಕ್ಷನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ವಿರಾಟ್ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬುದು ಅಧಿಕೃತವಾಗಿಲ್ಲ. ಈ ಪೋಸ್ಟರ್ ನೋಡಿ ಕೆಲವರು ವಿರಾಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಿದರೆ, ಇನ್ನೂ ಕೆಲವರು ವ್ರಾಂಗ್ ಬ್ರಾಂಡ್‍ನ ಜಾಹೀರಾತಿಗಾಗಿ, ಪ್ರಚಾರಕ್ಕಾಗಿ ಈ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

View this post on Instagram

 

Another debut after 10 years, can’t wait! 😀 #TrailerTheMovie www.trailerthemovie.com

A post shared by Virat Kohli (@virat.kohli) on

Leave a Reply

Your email address will not be published. Required fields are marked *