Sunday, 25th August 2019

Recent News

ಭಾರತದ ಮೊದಲ ಸಿನಿಮಾ ಮ್ಯೂಸಿಯಂ ಲೋಕಾರ್ಪಣೆ

ಮುಂಬೈ: ಭಾರತದ ಸಿನಿಮಾ ರಂಗದಲ್ಲೇ ಮೈಲಿಗಲ್ಲು ಎನ್ನುವಂತೆ ಭಾರತೀಯ ಸಿನಿಮಾದ ರಾಷ್ಟ್ರೀಯ ಮ್ಯೂಸಿಯಂ(ಎನ್‍ಎಂಐಸಿ) ಅನ್ನು ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಉದ್ಘಾಟನೆ ಮಾಡಿದ್ದಾರೆ.

ಇದು ಭಾರತದ ಮೊದಲ ಸಿನಿಮಾ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು ಎರಡು ಕಟ್ಟಡಗಳಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಮ್ಯೂಸಿಯಂ ನಿರ್ಮಿಸಲು ಒಟ್ಟು 140.61 ಕೋಟಿ ರೂ. ವೆಚ್ಚ ತಗಲಿದ್ದು, ಮುಂಬೈನ ಹಳೆಯ ಗುಲ್ಶಾನ್ ಮಹಲ್‍ನನ್ನು ನವೀಕರಿಸಿ ಎನ್‍ಎಂಐಸಿ ಮಾಡಲಾಗಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿಯವರು, ಸಿನಿಮಾಗಳು ಸಾಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲವು. ಸಿನಿಮಾಗಳನ್ನು ವೀಕ್ಷಿಸುವ ಜನರಿಗೆ ಅದು ಭರವಸೆ ಹಾಗೂ ಅವರ ಆಕಾಂಕ್ಷೆಗಳಿಗೆ ಆಕಾರ ಕಟ್ಟಿಕೊಡುತ್ತದೆ. ಹೊಸ ಭಾರತದಲ್ಲಿ ಲಕ್ಷ ಸಮಸ್ಯೆಗಳಿಗೆ ಕೋಟಿ ಪರಿಹಾರವಿದೆ. ಚಿತ್ರರಂಗಕ್ಕೆ ಸರ್ಕಾರ ಬೆಂಬಲ ನೀಡುತ್ತೆ. ಪೈರಸಿ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಹಾಗೂ ಫಿಲ್ಮ್ ಯೂನಿವರ್ಸಿಟಿ ಆರಂಭಿಸುವ ಬಗ್ಗೆ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ನಟ ಆಮಿರ್ ಖಾನ್, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ನಟಿ ಪರಿಣೀತಿ ಚೋಪ್ರಾ, ದಿವ್ಯಾ ದತ್ತಾ ಹಾಗೂ ಇನ್ನಿತರೆ ಕಲಾವಿದರು ಭಾಗಿಯಾಗಿದ್ದರು. ಮಹಾರಾಷ್ಟ್ರ ರಾಜ್ಯಪಾಲ ಸಿವಿ ರಾವ್, ಸಿಎಂ ದೇವೇಂದ್ರ ಫಡ್ನಾವಿಸ್, ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹಾಗೂ ರಾಮ್‍ದಾಸ್ ಅಠಾವಳೆ ಸೇರಿದಂತೆ ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ಮ್ಯೂಸಿಯಂನಲ್ಲಿ ಭಾರತೀಯ ಚಿತ್ರರಂಗದ ಇತಿಹಾಸ, ಸಿನಿಮಾಗಳ ಪೋಸ್ಟರ್ಸ್ ಹಾಗೂ ಸಿನಿಮಾ ಪ್ರಪಂಚದ ಬದುಕು ಹೇಗೆ ಸಾಗಿ ಬಂದಿದೆ ಎನ್ನುವ ಕುರಿತಾದ ಕೆಲವು ವಸ್ತುಗಳನ್ನು ಸಂಗ್ರಹಿಸಿ ಇರಿಸಲಾಗಿದೆ. ಮ್ಯೂಸಿಯಂಗೆ ಬರುವ ಜನರಿಗೆ ಸಿನಿಮಾ ಲೋಕದ ಬಗ್ಗೆ ಇನ್ನಷ್ಟು ತಿಳಿಸಬೇಕೆಂದು ಈ ಅದ್ಭುತ ಪರಿಕಲ್ಪನೆಯನ್ನು ಅನಾವರಣ ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *