Connect with us

ಸೇನೆಗೆ 83 ಮಂದಿ ಮಹಿಳಾ ಪೊಲೀಸರ ಮೊದಲ ಬ್ಯಾಚ್ ನಿಯೋಜನೆ

ಸೇನೆಗೆ 83 ಮಂದಿ ಮಹಿಳಾ ಪೊಲೀಸರ ಮೊದಲ ಬ್ಯಾಚ್ ನಿಯೋಜನೆ

ಬೆಂಗಳೂರು: 83 ಮಂದಿ ಮಹಿಳಾ ಪೊಲೀಸರನ್ನು ಒಳಗೊಂಡ ಮೊದಲ ಬ್ಯಾಚನ್ನು ಭಾರತೀಯ ಸೇನೆಗೆ ನಿಯೋಜನೆ ಮಾಡಲಾಗಿದೆ.

ಬೆಂಗಳೂರಿನ ದ್ರೋಣಾಚಾರ್ಯ ಪರೇಡ್ ಮೈದಾನದಲ್ಲಿ ನಡೆದ ಕಾಂರ್ಯಕ್ರಮದಲ್ಲಿ ಕೋವಿಡ್ 19 ಶಿಷ್ಟಾಚಾರಗಳನ್ನು ಪಾಲಿಸಿಕೊಂಡು ಮೊದಲ ಬ್ಯಾಚಿನ ಪಥಸಂಚಲನ ಕಾರ್ಯಕ್ರಮ ನಡೆಯಿತು.


ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಮತ್ತು ಶಾಲೆಯ ಬ್ರಿಗೇಡಿಯರ್ ಸಿ ದಯಲನ್ ಮಿಲಿಟರಿ ತರಬೇತಿಗೆ ಸಂಬಂಧಿಸಿದ 61 ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದಿಸಿದರು.

ಯುದ್ಧದ ಕೈದಿಗಳ ನಿರ್ವಹಣೆ, ಎಲ್ಲಾ ವಾಹನಗಳ ಚಾಲನೆ ಮತ್ತು ನಿರ್ವಹಣೆ, ಸಿಗ್ನಲ್ ಸಂವಹನ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಯನ್ನು ಮಹಿಳಾ ಸದಸ್ಯರಿಗೆ ನೀಡಲಾಗಿದೆ.

Advertisement
Advertisement