ಶಿವಮೊಗ್ಗ ಕಿಡಿಗೇಡಿಗಳಿಗೆ ಗುಂಡೇಟು ಬರೀ ಸ್ಯಾಂಪಲ್: ಕೆ.ಎಸ್ ಈಶ್ವರಪ್ಪ

- ಆಸ್ತಿ ಜಪ್ತಿ ಬಗ್ಗೆ ಮುನ್ಸೂಚನೆ ಕೊಟ್ರಾ ಮಾಜಿ ಸಚಿವ?

Advertisements

ಶಿವಮೊಗ್ಗ: ಪ್ರೇಮ್ ಸಿಂಗ್‍ಗೆ ಚಾಕು ಇರಿದ ಕಿಡಿಗೇಡಿಗಳಿಗೆ ಗುಂಡೇಟು ಬರೀ ಸ್ಯಂಪಲ್ ಅಷ್ಟೇ. ಮುಂದೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

Advertisements

ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ನನ್ನು ಮಾಜಿ ಸಚಿವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಈ ರೀತಿ ಕೃತ್ಯ ಮಾಡಿದವರಿಗೆ ಕಾಲಿಗೆ ಗುಂಡೇಟು ಹಾಕಿ ಒಳಗೆ ಕೂರಿಸಿದ್ದಾರೆ. ಇದು ಕೇವಲ ಸ್ಯಾಂಪಲ್ ಪೈರಿಂಗ್ ಮಾತ್ರ ಮುಂದೆ ಇನ್ನು ಇದೆ ಎಂದು ಹೇಳಿದರು. ಇದನ್ನೂ ಓದಿ: ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ: ಮಾಧುಸ್ವಾಮಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

Advertisements

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ಹಾಗೂ ರಾಘವೇಂದ್ರ ಜೊತೆ ಬಂದು ಭೇಟಿ ನೀಡಿದ್ದೇನೆ. ಮುಸ್ಲಿಂ ಗೂಂಡಾಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಪ್ರೇಮ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಕಿಡಿಗೇಡಿಗಳ ಆಸ್ತಿ ಮುಟ್ಟುಗೋಲು ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಈಶ್ವರಪ್ಪ ಹೇಳಿದರು.

Live Tv

Advertisements
Exit mobile version